ಟೋಕಿಯೊ: ರಷ್ಯಾಕ್ಕೆ ಪ್ಲೇಸ್ಟೇಷನ್ ಸಾಗಣೆ ಮತ್ತು ಆನ್‌ಲೈನ್ ಸ್ಟೋರ್‌ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಗೇಮಿಂಗ್ ದೈತ್ಯ ಸೋನಿ ಗುರುವಾರ ತಿಳಿಸಿದೆ.
ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸುವಂತೆ ಬಯಸುತ್ತಿರುವ ವಿಶ್ವಸಮುದಾಯದ ಸಾಲಿಗೆ ಸೇರಿಕೊಂಡಿರುವ ಸೋನಿ ಇಂಟರಾಕ್ಟೀವ್ ಎಂಟರ್‌ಟೈನ್‌ಮೆಂಟ್, ಪ್ಲೇಸ್ಟೇಷನ್ ಟ್ವಿಟರ್ ಖಾತೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ.
'ನಾವು ಎಲ್ಲಾ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಸಾಗಣೆಗಳು, ಗ್ರ್ಯಾನ್ ಟುರಿಸ್ಮೊ 7 ರ ಬಿಡುಗಡೆ ಮತ್ತು ಪ್ಲೇಸ್ಟೇಷನ್ ಸ್ಟೋರ್‌ನ ಕಾರ್ಯಾಚರಣೆಗಳನ್ನು ರಷ್ಯಾದಲ್ಲಿ ಸ್ಥಗಿತಗೊಳಿಸಿದ್ದೇವೆ' ಎಂದಿದೆ.
'ಮಾನವೀಯ ನೆರವನ್ನು ಬೆಂಬಲಿಸುವ ಅಂಗವಾಗಿ, ಸೋನಿ ಗ್ರೂಪ್ ಕಾರ್ಪೊರೇಷನ್, ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ (ಯುಎನ್‌ಎಚ್‌ಸಿಆರ್) ಮತ್ತು ಅಂತರರಾಷ್ಟ್ರೀಯ ಎನ್‌ಜಿಒಗೆ ಸೇವ್ ದಿ ಚಿಲ್ಡ್ರನ್‌ಗೆ ಉಕ್ರೇನ್ ದುರಂತದಲ್ಲಿನ ಸಂತ್ರಸ್ತರಿಗೆ ಬೆಂಬಲ ನೀಡಲು 2 ಮಿಲಿಯನ್ ಡಾಲರ್ ದೇಣಿಗೆ ನೀಡಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಈಗಾಗಲೇ ಮೆಕ್‌ಡೊನಾಲ್ಡ್, ಅಡಿದಾಸ್ ಮತ್ತು ಸ್ಯಾಮ್‌ಸಂಗ್ ಸೇರಿದಂತೆ ಹಲವು ಬಹುರಾಷ್ಟ್ರೀಯ ಕಂಪನಿಗಳು ರಷ್ಯಾದಲ್ಲಿನ ತನ್ನ ಪೂರ್ಣ ಕಾರ್ಯಾಚರಣೆಯನ್ನು ನಿಲ್ಲಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.