ADVERTISEMENT

ಸ್ಪಿನ್ನಿಯಲ್ಲಿ ಬಳಸಿದ ಕಾರುಗಳ ಬೆಲೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 16:01 IST
Last Updated 18 ಸೆಪ್ಟೆಂಬರ್ 2025, 16:01 IST
ಸ್ಪಿನ್ನಿ ಲೋಗೊ
ಸ್ಪಿನ್ನಿ ಲೋಗೊ   

ಬೆಂಗಳೂರು: ಬಳಸಿದ ಕಾರುಗಳ ಖರೀದಿ ಹಾಗೂ ಮಾರಾಟ ವೇದಿಕೆಯಾಗಿರುವ ‘ಸ್ಪಿನ್ನಿ’ ಬಳಸಿದ ಕಾರುಗಳ ಬೆಲೆಯನ್ನು ತಗ್ಗಿಸಿರುವುದಾಗಿ ಹೇಳಿದೆ.

ಹೊಸ ಕಾರುಗಳ ಮೇಲಿನ ಜಿಎಸ್‌ಟಿ ಪ್ರಮಾಣವು ಸೆಪ್ಟೆಂಬರ್‌ 22ರಿಂದ ತಗ್ಗಲಿದೆ. ಬಳಸಿದ ಕಾರುಗಳ ಮೇಲಿನ ಜಿಎಸ್‌ಟಿಯಲ್ಲಿ ಬದಲಾವಣೆ ಆಗುವುದಿಲ್ಲ. ಆದರೆ ಹೊಸ ಕಾರುಗಳ ಬೆಲೆ ಇಳಿಕೆಯು ಹಳೆಯ ಕಾರುಗಳ ಬೆಲೆಯ ಮೇಲೆಯೂ ಪ್ರಭಾವ ಬೀರುತ್ತದೆ. ಹೀಗಾಗಿ ಬಳಸಿದ ಕಾರುಗಳ ಬೆಲೆಯನ್ನು ಪರಿಷ್ಕರಿಸಲಾಗಿದೆ ಎಂದು ಸ್ಪಿನ್ನಿ ಹೇಳಿದೆ.

‘ಕಾರು ಖರೀದಿದಾರರು ಈಗ ಸ್ಪಿನ್ನಿಯಲ್ಲಿ ಕಾರುಗಳ ಬೆಲೆ ಇಳಿಕೆಯ ಪ್ರಯೋಜನ ಪಡೆಯಬಹುದು. ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರಿಗೆ ₹ 2 ಲಕ್ಷದವರೆಗೆ ರಿಯಾಯಿತಿ ಸಿಗಲಿದೆ’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ADVERTISEMENT

‘ಸ್ಪಿನ್ನಿ ಕಂಪನಿಗೆ ಗ್ರಾಹಕರೇ ಯಾವಾಗಲೂ ಮೊದಲು. ಬೆಲೆ ನಿಗದಿ, ಗುಣಮಟ್ಟ ಅಥವಾ ಖರೀದಿ ಮತ್ತು ಮಾರಾಟದ ಸೇವೆಗಳಲ್ಲಿ ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆಯ ಜೊತೆ ರಾಜಿ ಇಲ್ಲ’ ಎಂದು ಸ್ಪಿನ್ನಿ ಕಂಪನಿಯ ಹಿರಿಯ ಉಪಾಧ್ಯಕ್ಷ ಹರೀಶ್‌ ಯಾದವ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.