ADVERTISEMENT

ಶ್ರೀಲಂಕಾ: ಜಿಡಿಪಿ ಶೇ 4.5ರಷ್ಟು ದಾಖಲು

ಪಿಟಿಐ
Published 26 ಮಾರ್ಚ್ 2024, 15:39 IST
Last Updated 26 ಮಾರ್ಚ್ 2024, 15:39 IST
...... 
......    

ಕೊಲಂಬೊ: ಶ್ರೀಲಂಕಾದ ಆರ್ಥಿಕತೆ ಬೆಳವಣಿಗೆಯು (ಜಿಡಿಪಿ) 2023ರ ಮೂರನೇ ತ್ರೈಮಾಸಿಕದಲ್ಲಿ ಶೇ 4.5ರಷ್ಟು ಪ್ರಗತಿ ದಾಖಲಿಸಿದೆ ಎಂದು ಶ್ರೀಲಂಕಾದ ಕೇಂದ್ರೀಯ ಬ್ಯಾಂಕ್‌ ಮಂಗಳವಾರ ತಿಳಿಸಿದೆ. 

ಆರ್ಥಿಕ ಹಿಂಜರಿಕೆಗೆ ಸಿಲುಕಿರುವ ದ್ವೀಪರಾಷ್ಟ್ರದ ಜಿಡಿಪಿಯು ಕಳೆದ ಆರು ತ್ರೈಮಾಸಿಕಗಳಲ್ಲಿ ಋಣಾತ್ಮಕ ಬೆಳವಣಿಗೆ ದಾಖಲಿಸಿತ್ತು.

ದೇಶದಲ್ಲಿ ಹಣದುಬ್ಬರ ಕೂಡ ಇಳಿಕೆಯಾಗಿದೆ. ಜನವರಿಯಲ್ಲಿ ಶೇ 6.4ರಷ್ಟು ದಾಖಲಾಗಿದ್ದ ಗ್ರಾಹಕ ದರ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರವು, ಫೆಬ್ರುವರಿಯಲ್ಲಿ ಶೇ 5.9ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದೆ.

ADVERTISEMENT

ಫೆಬ್ರುವರಿ ಅಂತ್ಯಕ್ಕೆ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ₹37,485 ಕೋಟಿಗೆ (4.5 ಬಿಲಿಯನ್‌ ಡಾಲರ್‌) ಮುಟ್ಟಿದೆ.

‘ಕೇಂದ್ರೀಯ ಬ್ಯಾಂಕ್‌ನ ನಿರೀಕ್ಷೆಗಿಂತಲೂ ಮೀಸಲು ಸಂಗ್ರಹವು ಏರಿಕೆಯಾಗಿದೆ. ದೇಶೀಯ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ವಿದೇಶಿ ಕರೆನ್ಸಿಯ ಹೊರಹರಿವುಗಿಂತ ಒಳಹರಿವಿನ ಪ್ರಮಾಣ ಹೆಚ್ಚಿದೆ’ ಎಂದು ‌ಬ್ಯಾಂಕ್‌ನ ಗವರ್ನರ್‌ ‌ನಂದಲಾಲ್ ವೀರಸಿಂಘೆ ತಿಳಿಸಿದ್ದಾರೆ.

‘2023ರಲ್ಲಿ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ದೇಶದ ರೂಪಾಯಿಯ ಮೌಲ್ಯವು ಶೇ 12.2ರಷ್ಟು ಏರಿಕೆ ಕಂಡಿದೆ. ಪ್ರಸಕ್ತ ವರ್ಷದಲ್ಲಿಯೂ ಶೇ 6.7ರಷ್ಟು ಏರಿಕೆ ಕಾಣುವ ನಿರೀಕ್ಷೆಯಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.