ADVERTISEMENT

Star Ratings: ಟಿ.ವಿ., ಸ್ಟವ್‌ಗೆ ಇಂಧನ ದಕ್ಷತೆ ಮಾಹಿತಿ ಕಡ್ಡಾಯ

ಪಿಟಿಐ
Published 31 ಡಿಸೆಂಬರ್ 2025, 13:46 IST
Last Updated 31 ಡಿಸೆಂಬರ್ 2025, 13:46 IST
   

ನವದೆಹಲಿ: ರೆಫ್ರಿಜರೇಟರ್‌, ಟಿ.ವಿ., ಎಲ್‌ಪಿಜಿ ಗ್ಯಾಸ್‌ ಸ್ಟವ್‌ಗಳು, ಚಿಲ್ಲರ್‌ಗಳು ಸೇರಿದಂತೆ ವಿವಿಧ ಉತ್ಪನ್ನಗಳು ಅವು ಇಂಧನ ದಕ್ಷತೆಯ ದೃಷ್ಟಿಯಿಂದ ಎಷ್ಟು ‘ಸ್ಟಾರ್‌’ಗಳನ್ನು ಪಡೆದಿವೆ ಎಂಬುದನ್ನು ಉಲ್ಲೇಖಿಸುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದು ಜನವರಿ 1ರಿಂದಲೇ ಅನ್ವಯವಾಗಲಿದೆ.

ಇಂಧನ ದಕ್ಷತೆಯ ಬ್ಯೂರೊ ಇದಕ್ಕೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಿದೆ. ಡೀಪ್‌ ಫ್ರೀಜರ್‌ಗಳು, ವಿತರಣಾ ಟ್ರಾನ್ಸ್‌ಫಾರ್ಮರ್‌ಗಳು ಮತ್ತು ಗ್ರಿಡ್‌ಗೆ ಜೋಡಣೆಯಾಗುವ ಸೌರ ಇನ್ವರ್ಟರ್‌ಗಳಿಗೂ ಇದು ಕಡ್ಡಾಯವಾಗಲಿದೆ.

ಈ ಮೊದಲು ‘ಸ್ಟಾರ್‌’ ಮೂಲಕ ಇಂಧನ ದಕ್ಷತೆಯ ಬಗ್ಗೆ ಮಾಹಿತಿ ಒದಗಿಸುವುದು ಫ್ರಾಸ್ಟ್‌–ಫ್ರೀ ರೆಫ್ರಿಜರೇಟರ್‌ಗಳಿಗೆ, ಡೀಪ್‌ ಫ್ರೀಜರ್‌ಗಳಿಗೆ, ಡೈರೆಕ್ಟ್‌ ಕೂಲ್‌ ರೆಫ್ರಿಜರೇಟರ್‌ಗಳಿಗೆ, ವಿವಿಧ ಬಗೆಯ ಹವಾನಿಯಂತ್ರಕಗಳಿಗೆ, ಕಲರ್‌ ಟಿ.ವಿ. ಹಾಗೂ ಯುಎಚ್‌ಡಿ ಟಿ.ವಿ.ಗಳಿಗೆ ಕಡ್ಡಾಯ ಆಗಿರಲಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.