ADVERTISEMENT

Starlink: ಉಪಗ್ರಹ ಆಧಾರಿತ ಸೇವೆ ಆರಂಭಿಸಲು ಸ್ಟಾರ್‌ಲಿಂಕ್‌ಗೆ ಕೇಂದ್ರ ಅನುಮತಿ

​ಪ್ರಜಾವಾಣಿ ವಾರ್ತೆ
Published 8 ಮೇ 2025, 11:28 IST
Last Updated 8 ಮೇ 2025, 11:28 IST
<div class="paragraphs"><p> The Starlink logo</p></div>

The Starlink logo

   REUTERS/Dado Ruvic

ನವದೆಹಲಿ: ಉದ್ಯಮಿ ಇಲಾನ್ ಮಸ್ಕ್‌ ಒಡೆತನದ ಸ್ಟಾರ್‌ಲಿಂಕ್‌ಗೆ ದೇಶದಲ್ಲಿ ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೇವೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಈ ಬಗ್ಗೆ ದೂರಸಂಪರ್ಕ ಇಲಾಖೆಯು ಒಪ್ಪಂದ ಪತ್ರ (ಲೆಟರ್‌ ಆಫ್‌ ಇಂಟೆಂಟ್‌) ಜಾರಿ ಮಾಡಿದೆ. ನಿಯಮಗಳು, ಭದ್ರತಾ ಮಾನದಂಡವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಒಪ್ಪಂದ ಪತ್ರದಲ್ಲಿ ಸ್ಟಾರ್‌ಲಿಂಕ್‌ಗೆ ಸರ್ಕಾರ ಸೂಚಿಸಿದೆ.

ADVERTISEMENT

ಭೂಮಿಯಿಂದ ಸುಮಾರು 500ರಿಂದ 550 ಕಿ.ಮೀ ಎತ್ತರದಲ್ಲಿರುವ ಉಪಗ್ರಹಗಳನ್ನು ಬಳಸಿಕೊಂಡು ಇಂಟರ್‌ನೆಟ್ ಸೇವೆಯನ್ನು ಒದಗಿಸಲಾಗುತ್ತದೆ. ವಿಪರೀತ ಚಳಿ, ಮಂಜಿನ ವಾತಾವರಣ, ಆಲಿಕಲ್ಲು ಮಳೆ ಮತ್ತು ಚಂಡಮಾರುತದಂತಹ ಪರಿಸ್ಥಿತಿಗಳಲ್ಲಿ ಸ್ಟಾರ್‌ಲಿಂಕ್‌ ಸಂಪರ್ಕ ಸಾಧಿಸುತ್ತದೆ. ಗ್ರಾಮೀಣ ಮತ್ತು ರಿಮೋಟ್‌ ಏರಿಯಾದಲ್ಲೂ ಸೇವೆ ನೀಡಲು ಇವನ್ನು ಪ್ರತ್ಯೇಕವಾಗಿ ತಯಾರಿಸಲಾಗಿದೆ.

ದೇಶದ ದೂರಸಂಪರ್ಕ ಕಂಪನಿಗಳಾದ ರಿಲಯನ್ಸ್ ಜಿಯೊ ಮತ್ತು ಭಾರ್ತಿ ಏರ್‌ಟೆಲ್‌ ತನ್ನ ಗ್ರಾಹಕರಿಗೆ ಹೈಸ್ಪೀಡ್‌ ಇಂಟರ್‌ನೆಟ್‌ ಸೇವೆ ಒದಗಿಸಲು ಸ್ಟಾರ್‌ಲಿಂಕ್‌ ಜೊತೆ ಈಗಾಗಲೇ ಒಪ್ಪಂದ ಮಾಡಿಕೊಂಡಿವೆ. 

ಉತ್ತರ ಅಮೆರಿಕ, ಯುರೋಪ್‌, ಆಸ್ಟ್ರೇಲಿಯಾ, ಏಷ್ಯಾದ ಕೆಲವು ಭಾಗಗಳು, ದಕ್ಷಿಣ ಅಮೆರಿಕ ಮತ್ತು ಆಫ್ರಿಕಾದಲ್ಲಿ ಸ್ಟಾರ್‌ಲಿಂಕ್‌ ತನ್ನ ಸೇವೆಯನ್ನು ವಿಸ್ತರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.