ADVERTISEMENT

ಎಸ್‌ಬಿಐ: ಸಾಲ, ಠೇವಣಿ ಬಡ್ಡಿ ದರ ಕಡಿತ

ಪಿಟಿಐ
Published 8 ನವೆಂಬರ್ 2019, 20:29 IST
Last Updated 8 ನವೆಂಬರ್ 2019, 20:29 IST
ಎಸ್‌ಬಿಐ
ಎಸ್‌ಬಿಐ   

ಮುಂಬೈ: ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್‌) ಸಾಲಗಳ ಮೇಲಿನ ಬಡ್ಡಿ ದರಗಳನ್ನು ಶೇ 0.05ರಷ್ಟು ತಗ್ಗಿಸಿದೆ.

ಇದರ ಜತೆಗೆ, ಠೇವಣಿಗಳ ಮೇಲಿನ ಬಡ್ಡಿ ದರಗಳನ್ನೂ ಶೇ 0.15 ರಿಂದ ಶೇ 0.75ರವರೆಗೆ ಕಡಿಮೆ ಮಾಡಿದೆ. ಹೊಸ ಬಡ್ಡಿ ದರಗಳು ಇದೇ 10ರಿಂದ ಜಾರಿಗೆ ಬರಲಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಬ್ಯಾಂಕ್‌ ಸತತ 7ನೇ ಬಾರಿಗೆ ಬಡ್ಡಿ ದರಗಳನ್ನು ಇಳಿಸಿದಂತಾಗಿದೆ.

ಬಹುತೇಕ ಸಾಲಗಳಿಗೆ ಪರಿಗಣಿಸುವ ಒಂದು ವರ್ಷದ ‘ಎಂಸಿಎಲ್‌ಆರ್‌’, ಈಗ ಶೇ 8ಕ್ಕೆ ಇಳಿಯಲಿದೆ. ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನಗದು ಇರುವುದರಿಂದ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನೂ ಕಡಿಮೆ ಮಾಡಲಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ADVERTISEMENT

ಠೇವಣಿ ಬಡ್ಡಿ ದರ: ಒಂದು ವರ್ಷದಿಂದ ಎರಡು ವರ್ಷಗಳ ಒಳಗಿನ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಶೇ 0.15ರಷ್ಟು ಇಳಿಸಲಾಗಿದೆ. ₹ 1 ಕೋಟಿಗಿಂತ ಹೆಚ್ಚಿನ ಮೊತ್ತದ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಶೇ 0.30 ರಿಂದ ಶೇ 0.75ರವರೆಗೆ ಕಡಿಮೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.