ನವದೆಹಲಿ: ಮನೆಗಳ ನೋಂದಣಿ ಮೇಲಿನ ಮುದ್ರಾಂಕ ಶುಲ್ಕವನ್ನು ರಾಜ್ಯ ಸರ್ಕಾರಗಳು ಕಡಿಮೆ ಮಾಡಬೇಕು ಎಂದು ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿ (ನರೆಡ್ಕೊ) ಒತ್ತಾಯಿಸಿದೆ.
₹45 ಲಕ್ಷದವರೆಗಿನ ಮನೆಗಳಿಗೆ ಮುದ್ರಾಂಕ ಶುಲ್ಕವನ್ನು ತಗ್ಗಿಸಬೇಕು. ಇದು ಮನೆಗಳಿಗೆ ಬೇಡಿಕೆ ಮತ್ತು ಪೂರೈಕೆಯನ್ನು ಹೆಚ್ಚಿಸಲಿದ್ದು, ಕಡಿಮೆ ದರದಲ್ಲಿ ಮನೆ ಹೊಂದಲು ಸಾಧ್ಯವಾಗುತ್ತದೆ ಎಂದು ನರೆಡ್ಕೊ ಅಧ್ಯಕ್ಷ ಜಿ. ಹರಿಬಾಬು ಹೇಳಿದ್ದಾರೆ.
ಜಾಗದ ಬೆಲೆ ಮತ್ತು ನಿರ್ಮಾಣ ವೆಚ್ಚದಲ್ಲಿನ ಹೆಚ್ಚಳದಿಂದ ಮನೆಗಳ ಮಾರಾಟದಲ್ಲಿ ಇಳಿಕೆಯಾಗಿದೆ. ಹೀಗಾಗಿ ಮನೆಗಳ ನೋಂದಣಿಗಿರುವ ಮುದ್ರಾಂಕ ಶುಲ್ಕವನ್ನು ಕಡಿಮೆ ಮಾಡಬೇಕು. ಪ್ರಸ್ತುತ ಮುದ್ರಾಂಕ ಶುಲ್ಕ ರಾಜ್ಯಗಳಲ್ಲಿ ಶೇ 5ರಿಂದ ಶೇ 10ರ ನಡುವೆ ಇದೆ ಎಂದು ತಿಳಿಸಿದ್ದಾರೆ.
ಮನೆಗಳ ಪೂರೈಕೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರಗಳು ಕೊಳೆಗೇರಿ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಹರಿಬಾಬು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.