ADVERTISEMENT

Stock Market: ಸೆನ್ಸೆಕ್ಸ್ 961 ಅಂಶ ಕುಸಿತ

ಪಿಟಿಐ
Published 27 ಫೆಬ್ರುವರಿ 2026, 15:25 IST
Last Updated 27 ಫೆಬ್ರುವರಿ 2026, 15:25 IST
ಸೆನ್ಸೆಕ್ಸ್
ಸೆನ್ಸೆಕ್ಸ್   

ಮುಂಬೈ: ವಾಹನ, ಎಫ್‌ಎಂಸಿಜಿ ಮತ್ತು ಔಷಧ ಕಂಪನಿಗಳ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಶುಕ್ರವಾರದ ವಹಿವಾಟಿನಲ್ಲಿ ದೇಶದ ಷೇರುಪೇಟೆ ಸೂಚ್ಯಂಕಗಳು ಶೇ 1ಕ್ಕೂ ಹೆಚ್ಚು ಕುಸಿತ ಕಂಡಿವೆ. 

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 961 ಅಂಶ (ಶೇ 1.17) ಇಳಿಕೆಯಾಗಿ, 81,287ಕ್ಕೆ ವಹಿವಾಟು ಅಂತ್ಯಗೊಂಡಿದೆ. ವಹಿವಾಟಿನ ವೇಳೆ 1,089 ಅಂಶ ಇಳಿದಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 371 ಅಂಶ (ಶೇ 1.25) ಕಡಿಮೆಯಾಗಿ, 25,178ಕ್ಕೆ ಕೊನೆಗೊಂಡಿದೆ.

ಸೂಚ್ಯಂಕಗಳ ಇಳಿಕೆಯಿಂದ ಹೂಡಿಕೆದಾರರ ಸಂಪತ್ತು ಒಂದೇ ದಿನ ₹4.98 ಲಕ್ಷ ಕೋಟಿಯಷ್ಟು ಕರಗಿದೆ. 

ADVERTISEMENT

‘ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನಿಂದ ಹೂಡಿಕೆದಾರರು ಲಾಭದ ಗಳಿಕೆಗಾಗಿ ಷೇರುಗಳ ಮಾರಾಟಕ್ಕೆ ಮುಂದಾದರು. ಇದು ಸೂಚ್ಯಂಕಗಳ ಇಳಿಕೆಗೆ ಕಾರಣವಾಗಿದೆ’ ಎಂದು ಲೈವ್‌ಲಾಂಗ್‌ ವೆಲ್ತ್‌ನ ಸಂಶೋಧನಾ ವಿಶ್ಲೇಷಕ ಮತ್ತು ಸಂಸ್ಥಾಪಕ ಹರಿಪ್ರಸಾದ್‌ ಕೆ. ಹೇಳಿದ್ದಾರೆ. 

ವಿದೇಶಿ ಬಂಡವಾಳ ಹೊರಹರಿವು ಸಹ ಸೂಚ್ಯಂಕಗಳ ಇಳಿಕೆಗೆ ಕಾರಣವಾಯಿತು ಎಂದು ಹೇಳಿದ್ದಾರೆ.

ಸನ್‌ ಫಾರ್ಮಾ, ಭಾರ್ತಿ ಏರ್‌ಟೆಲ್, ಬಜಾಜ್‌ ಫಿನ್‌ಸರ್ವ್‌, ಇಂಟರ್‌ಗ್ಲೋಬ್‌ ಏವಿಯೇಷನ್‌, ಮಹೀಂದ್ರ ಆ್ಯಂಡ್ ಮಹೀಂದ್ರ ಮತ್ತು ಮಾರುತಿ ಸುಜುಕಿಯ ಷೇರಿನ ಮೌಲ್ಯ ಇಳಿದಿದೆ. ಎಚ್‌ಸಿಎಲ್ ಟೆಕ್, ಟ್ರೆಂಟ್‌, ಇನ್ಫೊಸಿಸ್ ಮತ್ತು ಎಟರ್ನಲ್‌ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ಏಷ್ಯಾದ ಮಾರುಕಟ್ಟೆಯಲ್ಲಿ ದಕ್ಷಿಣ ಕೊರಿಯಾ ನಕಾರಾತ್ಮಕ ವಹಿವಾಟಿನಲ್ಲಿ ಅಂತ್ಯಗೊಂಡಿದ್ದರೆ, ಜಪಾನ್‌, ಶಾಂಘೈ ಮತ್ತು ಹಾಂಗ್‌ಕಾಂಗ್‌ ಮಾರುಕಟ್ಟೆಯು ಸಕಾರಾತ್ಮಕ ವಹಿವಾಟು ಕಂಡಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 1.26ರಷ್ಟು ಏರಿಕೆಯಾಗಿದೆ. ಪ್ರತೀ ಬ್ಯಾರಲ್‌ ದರವು 71.64 ಡಾಲರ್ ಆಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.