ADVERTISEMENT

ಷೇರುಪೇಟೆ ವಹಿವಾಟಿನಲ್ಲಿ ಸೂಚ್ಯಂಕಗಳ ಇಳಿಕೆ: ಕರಗಿದ ₹3.63 ಲಕ್ಷ ಕೋಟಿ ಎಂ–ಕ್ಯಾಪ್

ಪಿಟಿಐ
Published 12 ಜನವರಿ 2026, 1:01 IST
Last Updated 12 ಜನವರಿ 2026, 1:01 IST
   

ನವದೆಹಲಿ: ಕಳೆದ ವಾರದ ಷೇರುಪೇಟೆ ವಹಿವಾಟಿನಲ್ಲಿ ಸೂಚ್ಯಂಕಗಳ ಇಳಿಕೆಯಿಂದ ಪ್ರಮುಖ 10 ಕಂಪನಿಗಳ ಪೈಕಿ 7 ಕಂಪನಿಗಳ ಮಾರುಕಟ್ಟೆ ಬಂಡವಾಳ (ಎಂ–ಕ್ಯಾಪ್‌) ಮೌಲ್ಯವು ₹3.63 ಲಕ್ಷ ಕೋಟಿಯಷ್ಟು ಕರಗಿದೆ.

ಕಳೆದ ವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 2,185 ಅಂಶ (ಶೇ 2.54ರಷ್ಟು) ಕುಸಿದಿದೆ. ರಿಲಯನ್ಸ್ ಇಂಡಸ್ಟ್ರೀಸ್‌ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು ಅತಿ ಹೆಚ್ಚು ಇಳಿಕೆ ಕಂಡಿದೆ.

‘ಅಮೆರಿಕದಿಂದ ಸುಂಕ ಹೆಚ್ಚಳದ ಆತಂಕ ಮತ್ತು ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ದೇಶದ ಷೇರುಪೇಟೆ ಮೇಲೆ ಪರಿಣಾಮ ಬೀರಿದವು’ ಎಂದು ಎನ‍್ರಿಚ್‌ ಮನಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪೊನ್ಮುಡಿ ಆರ್. ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.