ADVERTISEMENT

ಫೆ 1ರಂದು ಭಾನುವಾರವೂ ಷೇರುಪೇಟೆ ತೆರೆದಿರುತ್ತದೆ.. ಏಕೆ? ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜನವರಿ 2026, 13:44 IST
Last Updated 31 ಜನವರಿ 2026, 13:44 IST
ಷೇರುಪೇಟೆ
ಷೇರುಪೇಟೆ   

ಭಾರತೀಯ ಷೇರುಪೇಟೆಗಳಾದ ರಾಷ್ಟ್ರೀಯ ಷೇರು ಸೂಚ್ಯಂಕ(ಎನ್ ಎಸ್ ಇ), ಬಾಂಬೆ ಷೇರು ಸೂಚ್ಯಂಕಗಳು(ಬಿ ಎಸ್ ಇ) ಇದೇ ಫೆ 1 ರಂದು ಭಾನುವಾರವೂ ಕಾರ್ಯನಿರ್ವಹಿಸುತ್ತಿವೆ.

ಷೇರುಪೇಟೆಗಳು ಸಾಮಾನ್ಯವಾಗಿ ವಾರದಲ್ಲಿ ಐದು ದಿನ ಮಾತ್ರ ತೆರೆದಿರುತ್ತವೆ. ವಾರಾಂತ್ಯ ಶನಿವಾರ ಮತ್ತು ಭಾನುವಾರ ರಜೆ ಇರುತ್ತದೆ. ಆದರೆ, ಫೆ 1 ರಂದು ಕೇಂದ್ರ ಬಜೆಟ್ ಮಂಡನೆ ಇರುವುದರಿಂದ. ಬಜೆಟ್ ಮಂಡನೆಯ ಸಂದರ್ಭ ನೈಜ ಸಮಯದ ಪ್ರತಿಕ್ರಿಯೆಗಾಗಿ ಷೇರುಪೇಟೆಗಳು ಕಾರ್ಯನಿರ್ವಹುಸುತ್ತಿವೆ. ಹಾಗಾಗಿ, ಎಂದಿನಂತೆ ಟ್ರೇಡಿಂಗ್ ನಡೆಯಲಿದೆ.

ದೀಪಾವಳಿ ದಿನ ಒಂದು ಗಂಟೆ

ಸಾಮಾನ್ಯವಾಗಿ ಹಬ್ಬ ಹಾಗೂ ರಾಷ್ಟ್ರೀಯ ರಜೆ ದಿನಗಳಲ್ಲಿ ಷೇರುಪೇಟೆ ಮುಚ್ಚಿರುತ್ತವೆ. ಆದರೆ, ದೀಪಾವಳಿಯ ಲಕ್ಷ್ಮೀ ಪೂಜೆ ಸಮಯದಲ್ಲಿ ಸಂಜೆ ಒಂದು ಗಂಟೆ ವಹಿವಾಟು ನಡೆಸಲಾಗುತ್ತದೆ. ಇದನ್ನು ಶುಭ ಮುಹೂರ್ತದ ಟೇಡಿಂಗ್ ಎಂದು ಕರೆಯಲಾಗುತ್ತದೆ. ಈ ಸಂದರ್ಭ ಹೂಡಿಕೆ ಮಾಡಿದರೆ ಶುಭವಾಗುತ್ತದೆ ಎಂಬ ನಂಬಿಕೆ ಇದೆ.

ADVERTISEMENT

ಬಜೆಟ್ ದಿನದ ಟ್ರೇಡಿಂಗ್ ನಿಯಮ ಮತ್ತು ಸಮಯ

ಬಜೆಟ್ ದಿನದ ಷೇರುಪೇಟೆಯ ವಹಿವಾಟುವೆಂದಿನಂತೆ ಬೆಳಿಗ್ಗೆ 9.15ಕ್ಕೆ ಆರಂಭವಾಗಿ 3.30ಕ್ಕೆ ಅಂತ್ಯಗೊಳ್ಳುತ್ತದೆ. ಬೆಳಿಗ್ಗೆ 9 ಪ್ರೀಟ್ರೇಡಿಂಗ್ ಸೆಷನ್ ಆಗಿರುತ್ತದೆ. ಆಪ್ಷನ್ ಟ್ರೇಡಿಂಗ್ ನಿಯಮಗಳು ಎಂದಿನಂತೆಯೇ ಇರಲಿವೆ.

ಈಕ್ವಿಟಿ, ಫ್ಯೂಚರ್ಸ್, ಆಪ್ಷನ್ ಮತ್ತು ಕಮಾಡಿಟಿ ಸೇರಿದಂತೆ ಪ್ರಮುಖ ಸೆಗ್ಮೆಂಟ್ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆಯಾದರೂ, ಆಯ್ದ ವಿಶೇಷ ಸೆಗ್ನೆಂಟ್ ನಡೆಯುವುದಿಲ್ಲ ಎಂದು ಬಿಎಸ್‌ಇ ಸ್ಪಷ್ಟಪಡಿಸಿದೆ.

ಕಮಾಡಿಟಿ ಪೇಟೆ

ಕಮಾಡಿಟಿ ಮಾರುಕಟ್ಟೆಗಳು ಸಹ ತೆರೆದಿರುತ್ತವೆ. ನಿಯಮಿತ ಸಮಯವನ್ನು ಅನುಸರಿಸಿ MCX ವಿಶೇಷ ನೇರ ವ್ಯಾಪಾರ ಅವಧಿಯನ್ನು ನಡೆಸುತ್ತದೆ. MCX ನ ಪ್ರೀಓಪನ್ ಅವಧಿ ಬೆಳಿಗ್ಗೆ 8:45ಕ್ಕೆ ಪ್ರಾರಂಭವಾಗಿ ಬೆಳಿಗ್ಗೆ 8:59ರವರೆಗೆ ನಡೆಯಲಿದೆ, ಸಾಮಾನ್ಯ ಟ್ರೇಡಿಂಗ್ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಇರುತ್ತದೆ. ಕ್ಲೈಂಟ್ ಕೋಡ್ ಮಾರ್ಪಾಡುಗಳನ್ನು ಸಂಜೆ 5:15 ರವರೆಗೆ ಅನುಮತಿಸಲಾಗುತ್ತದೆ. ಬಜೆಟ್ ಅವಧಿಯಲ್ಲಿ ಘೋಷಣೆಗಳ ಆಧಾರದಲ್ಲಿ ಚಿನ್ನ, ಬೆಳ್ಳಿ, ಕಚ್ಚಾ ತೈಲ ಮತ್ತು ಕೃಷಿ ಸಂಬಂಧಿತ ಸರಕು ಟ್ರೇಡಿಂಗ್ ನೈಜ ಸಮಯದ ಪ್ರತಿಕ್ರಿಯೆಯೊಂದಿಗೆ ನಿರಂತರ ನಡೆಯುತ್ತದೆ.

ಬಜೆಟ್ ಮೇಲೆ ನಿರೀಕ್ಷೆ

ಮಾರುಕಟ್ಟೆ ಭಾವನೆಗಳು ಅತ್ಯಂತ ಸೂಕ್ಷ್ಮವಾಗಿರುವ ಸಮಯದಲ್ಲಿ ಈ ವರ್ಷದ ಬಜೆಟ್ ಮಂಡಿಸಲಾಗುತ್ತಿದೆ. ಇತ್ತೀಚಿನ ಏರಿಳಿತಗಳು ಮತ್ತು ಜಾಗತಿಕ ಅನಿಶ್ಚಿತತೆಗಳು ಅಪಾಯದ ಸೂಚನೆ ನೀಡಿವೆ. ಹಾಗಾಗಿ, ಬಜೆಟ್‌ ಮೇಲೆ ನಿರೀಕ್ಷೆ ಹೆಚ್ಚಿದೆ. ಬಂಡವಾಳ ವೆಚ್ಚದ ಮೂಲಕ ಬೆಳವಣಿಗೆಗೆ ಬೆಂಬಲವನ್ನು ಕಾಯ್ದುಕೊಳ್ಳುವಾಗ ಸರ್ಕಾರವು ಹಣಕಾಸಿನ ಬಲವರ್ಧನೆಗೆ ಬದ್ಧವಾಗಿರುತ್ತದೆ ಎಂಬ ನಿರೀಕ್ಷೆಯನ್ನು ವಿಶ್ಲೇಷಕರು ಹೊಂದಿದ್ದಾರೆ. ರಕ್ಷಣೆ, ಮೂಲಸೌಕರ್ಯ, ವಿದ್ಯುತ್, ನವೀಕರಿಸಬಹುದಾದ ಇಂಧನ ಮತ್ತು ಉತ್ಪಾದನೆ-ಸಂಬಂಧಿತ ಪ್ರೋತ್ಸಾಹಕ ಯೋಜನೆಗಳ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.