ADVERTISEMENT

ಷೇರುಪೇಟೆ ಸೂಚ್ಯಂಕ: ಸೆನ್ಸೆಕ್ಸ್ 271 ಅಂಶ ಇಳಿಕೆ

ಪಿಟಿಐ
Published 19 ಮೇ 2025, 12:47 IST
Last Updated 19 ಮೇ 2025, 12:47 IST
<div class="paragraphs"><p>ಿಿಐ</p></div>

ಿಿಐ

   

ಮುಂಬೈ: ದೇಶದ ಷೇರು ಸೂಚ್ಯಂಕಗಳು ಸೋಮವಾರದ ವಹಿವಾಟಿನಲ್ಲಿ ಇಳಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 271 ಅಂಶ ಇಳಿಕೆಯಾಗಿ, 82,059ಕ್ಕೆ ವಹಿವಾಟು ಅಂತ್ಯಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 74 ಅಂಶ ಕಡಿಮೆಯಾಗಿ, 24,945ಕ್ಕೆ ಕೊನೆಗೊಂಡಿದೆ. 

ADVERTISEMENT

ಎಟರ್ನಲ್‌, ಇನ್ಫೊಸಿಸ್‌, ಟಿಸಿಎಸ್‌, ಟೆಕ್ ಮಹೀಂದ್ರ, ರಿಲಯನ್ಸ್ ಇಂಡಸ್ಟ್ರೀಸ್‌, ಏಷ್ಯನ್‌ ಪೇಂಟ್ಸ್, ಎಚ್‌ಸಿಎಲ್‌ ಟೆಕ್‌ ಮತ್ತು ಅದಾನಿ ಪೋರ್ಟ್ಸ್‌ನ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ. ಪವರ್ ಗ್ರಿಡ್‌, ಬಜಾಜ್‌ ಫೈನಾನ್ಸ್‌, ಎನ್‌ಟಿಪಿಸಿ, ಎಸ್‌ಬಿಐ ಮತ್ತು ಇಂಡಸ್‌ಇಂಡ್‌ ಬ್ಯಾಂಕ್‌ನ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ಲಾಭದ ಉದ್ದೇಶಕ್ಕೆ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಂದಾಗಿದ್ದರಿಂದ ಸೂಚ್ಯಂಕಗಳು ಇಳಿಕೆ ಕಂಡವು ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಏಷ್ಯಾದ ಮಾರುಕಟ್ಟೆಯಲ್ಲಿ ದಕ್ಷಿಣ ಕೊರಿಯಾ, ಜಪಾನ್‌, ಹಾಂಗ್‌ ಕಾಂಗ್‌ ನಕಾರಾತ್ಮಕ ವಹಿವಾಟಿನಲ್ಲಿ ಅಂತ್ಯಗೊಂಡಿದ್ದರೆ, ಶಾಂಘೈ ಸಕಾರಾತ್ಮಕ ವಹಿವಾಟು ಕಂಡಿದೆ.

ಜಾಗತಿಕ ಬ್ರೆಂಟ್‌ ಕಚ್ಚಾ ತೈಲ ದರವು ಶೇ 0.41ರಷ್ಟು ಇಳಿಕೆಯಾಗಿದೆ. ಪ್ರತೀ ಬ್ಯಾರೆಲ್‌ 65.14 ಡಾಲರ್ (₹5,566) ಆಗಿದೆ. ಶುಕ್ರವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹8,831 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.