ADVERTISEMENT

ಸೆನ್ಸೆಕ್ಸ್ 484 ಅಂಶ ಏರಿಕೆ

ಪಿಟಿಐ
Published 17 ಅಕ್ಟೋಬರ್ 2025, 15:57 IST
Last Updated 17 ಅಕ್ಟೋಬರ್ 2025, 15:57 IST
<div class="paragraphs"><p>ಸೆನ್ಸೆಕ್ಸ್</p></div>

ಸೆನ್ಸೆಕ್ಸ್

   

ಮುಂಬೈ: ಬ್ಯಾಂಕಿಂಗ್‌ ಮತ್ತು ತೈಲ ಕಂಪನಿಗಳ ಷೇರು ಖರೀದಿ ಹೆಚ್ಚಳದಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಶುಕ್ರವಾರದ ವಹಿವಾಟಿನಲ್ಲಿ ಏರಿಕೆ ಕಂಡಿವೆ. ವಿದೇಶಿ ಬಂಡವಾಳದ ಒಳಹರಿವು ಸಹ ಸೂಚ್ಯಂಕಗಳ ಏರಿಕೆಗೆ ನೆರವಾಗಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 484 ಅಂಶ ಏರಿಕೆಯಾಗಿ 83,952ಕ್ಕೆ ಕೊನೆಗೊಂಡಿದೆ. ವಹಿವಾಟಿನ ನಡುವಿನಲ್ಲಿ 704 ಅಂಶಗಳವರೆಗೆ ಜಿಗಿದಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ 124 ಅಂಶ ಹೆಚ್ಚಳವಾಗಿ, 25,709ಕ್ಕೆ ವಹಿವಾಟು ಅಂತ್ಯಗೊಂಡಿದೆ. ಇದು 52 ವಾರಗಳ ಗರಿಷ್ಠ ಮಟ್ಟದ ಏರಿಕೆಯಾಗಿದೆ.

ADVERTISEMENT

ಗುರುವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹997 ಕೋಟಿ ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದಾರೆ. ಇದೇ ಅವಧಿಯಲ್ಲಿ ದೇಶಿ ಸಾಂಸ್ಥಿಕ ಹೂಡಿಕೆದಾರರು ₹4,076 ಕೋಟಿ ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದಾರೆ. 

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರವು ಶೇ 0.92ರಷ್ಟು ಇಳಿಕೆಯಾಗಿದೆ. ಪ್ರತೀ ಬ್ಯಾರೆಲ್ ದರವು 60.50 ಡಾಲರ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.