ADVERTISEMENT

Stock Markets: ಏರಿಳಿತ ಕಂಡ ಷೇರುಪೇಟೆ ಸೂಚ್ಯಂಕ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 14:34 IST
Last Updated 4 ಫೆಬ್ರುವರಿ 2026, 14:34 IST
.
.   

ಮುಂಬೈ: ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಬುಧವಾರದ ಆರಂಭದ ವಹಿವಾಟಿನಲ್ಲಿ ಗಳಿಸಿದ್ದ ಏರಿಕೆಯನ್ನು ಅಂತ್ಯದವರೆಗೂ ಉಳಿಸಿಕೊಳ್ಳಲಿಲ್ಲ.

‘ಕೃತಕ ಬುದ್ಧಿಮತ್ತೆ ವಲಯದ ನವೋದ್ಯಮ ಆಂಥ್ರೊಪಿಕ್ ಹಲವು ಕೆಲಸಗಳನ್ನು ಸ್ವಯಂಚಾಲಿತವಾಗಿ ನಿರ್ವಹಿಸಬಲ್ಲ ಸಾಧನವನ್ನು ಬಿಡುಗಡೆ ಮಾಡಿದೆ. ಇದು ಸಾಂಪ್ರದಾಯಿಕ ಸಾಫ್ಟ್‌ವೇರ್ ಉದ್ಯಮದ ಮಾದರಿಗೆ ಸವಾಲು ಸೃಷ್ಟಿಸಬಲ್ಲದು ಮತ್ತು ಉದ್ಯಮದ ಮೇಲೆ ಪರಿಣಾಮ ಬೀರಬಹುದು ಎಂಬ ಕಳವಳವನ್ನು ಹುಟ್ಟುಹಾಕಿದೆ’ ಎಂದು ಎನ‍್ರಿಚ್‌ ಮನಿ ಸಂಸ್ಥೆಯ ಸಿಇಒ ಪೊನ್ಮುಡಿ ಆರ್‌. ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 78 ಅಂಶ ಏರಿಕೆಯಾಗಿ, 83,817ಕ್ಕೆ ವಹಿವಾಟು ಕೊನೆಗೊಂಡಿತು. ವಹಿವಾಟಿನ ವೇಳೆ 83,947ರವರೆಗೆ ತಲುಪಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 48 ಅಂಶ ಹೆಚ್ಚಳವಾಗಿ, 25,776ಕ್ಕೆ ಅಂತ್ಯಗೊಂಡಿದೆ.

ADVERTISEMENT

ಸೆನ್ಸೆಕ್ಸ್‌ ಸೂಚ್ಯಂಕದ ಭಾಗವಾಗಿರುವ ಇನ್ಫೊಸಿಸ್‌, ಟಿಸಿಎಸ್, ಎಚ್‌ಸಿಎಲ್‌ ಟೆಕ್ ಮತ್ತು ಟೆಕ್‌ ಮಹೀಂದ್ರ ಷೇರು ಮೌಲ್ಯ ಇಳಿಕೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.