ಬೆಂಗಳೂರು: ಸೌರಶಕ್ತಿ ಆಧರಿಸಿ ಕೆಲಸ ಮಾಡುವ ವಾಟರ್ ಹೀಟರ್‌ಗಳನ್ನು ತಯಾರಿಸುವ ಸುದರ್ಶನ್ ಸೌರ್ ಕಂಪನಿಯು ಕೇಂದ್ರ ಸರ್ಕಾರದ ಇಂಧನ ಕ್ಷಮತೆ ಬ್ಯೂರೊದಿಂದ (ಬಿಇಇ) ಮೂರು ಸ್ಟಾರ್ ರೇಟಿಂಗ್ ಪಡೆದಿರುವ ಸೋಲಾರ್ ವಾಟರ್ ಹೀಟರ್‌ಗಳನ್ನು ಮಂಗಳವಾರ ಬಿಡುಗಡೆ ಮಾಡಿದೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಉತ್ಪನ್ನ ಬಿಡುಗಡೆ ಮಾಡಲಾಯಿತು. ಕೇಂದ್ರ ಸರ್ಕಾರದ ಇಂಧನ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುವ ಬಿಇಇ ಈ ರೇಟಿಂಗ್ ನೀಡಿದೆ ಎಂದು ಕಂಪನಿ ತಿಳಿಸಿದೆ. ‘ಇದೇ ಮೊದಲ ಬಾರಿಗೆ ಸೋಲಾರ್ ವಾಟರ್ ಹೀಟರ್‌ಗಳಿಗೆ ಈ ರೀತಿಯ ರೇಟಿಂಗ್ ದೊರೆತಿದೆ. ರೇಟಿಂಗ್ ಪಡೆದ ಮೊದಲಿಗರು ನಾವು’ ಎಂದು ಕೂಡ ಕಂಪನಿ ಹೇಳಿದೆ.
ಸ್ಟಾರ್ ರೇಟಿಂಗ್ ವ್ಯವಸ್ಥೆಯು ಗ್ರಾಹಕರಿಗೆ ಅವರು ನೀಡುವ ಹಣಕ್ಕೆ ಉತ್ತಮ ಉತ್ಪನ್ನ ಸಿಗುತ್ತದೆ ಎಂಬುದನ್ನು ಖಾತರಿಪಡಿಸುತ್ತದೆ. ಈ ಉತ್ಪನ್ನಕ್ಕೆ 10 ವರ್ಷಗಳ ಗ್ಯಾರಂಟಿ ಕೂಡ ಇದೆ ಎಂದು ಕಂಪನಿಯು ತಿಳಿಸಿದೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರವಿ ಕುಲಕರ್ಣಿ ಮತ್ತು ಇತರರು ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.