ADVERTISEMENT

ಸೂರ್ಯಕಾಂತಿ ಎಣ್ಣೆಯ ಬೆಲೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2022, 20:14 IST
Last Updated 6 ಮಾರ್ಚ್ 2022, 20:14 IST
   

ಬೆಂಗಳೂರು: ಉಕ್ರೇನ್‌ ಬಿಕ್ಕಟ್ಟಿನ ಕಾರಣ ರಾಜ್ಯದಲ್ಲಿ ಸೂರ್ಯಕಾಂತಿ ಎಣ್ಣೆಯ ಬೆಲೆ ಏರುಗತಿಯಲ್ಲಿದ್ದು, ಒಂದು ವಾರದಲ್ಲಿ ಲೀಟರ್‌ ದರ ₹130 ರಿಂದ ₹170ಕ್ಕೆ ಹೆಚ್ಚಳವಾಗಿದೆ.

ಭಾರತಕ್ಕೆ ಉಕ್ರೇನ್‌ ದೇಶವು ಸೂರ್ಯಕಾಂತಿ ಎಣ್ಣೆಯನ್ನು ಪೂರೈಸುವ ಪ್ರಮುಖ ದೇಶವಾಗಿದೆ. ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧದಿಂದಾಗಿ ಪೂರೈಕೆಯ ಸರಪಳಿಯಲ್ಲಿ ವ್ಯಾಪಾರಸ್ಥರಿಗೆ ಅಡೆತಡೆ ಎದುರಾಗಿದೆ. ಇದರಿಂದ ಸೂರ್ಯಕಾಂತಿ ಎಣ್ಣೆಯ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಯುದ್ಧವು ಉಲ್ಬಣಗೊಳ್ಳುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಎಣ್ಣೆಯ ಬಿಸಿ ಮತ್ತಷ್ಟು ತಟ್ಟಲಿದೆ ಎಂದು ವ್ಯಾಪಾರಿಗಳು ಎಚ್ಚರಿಸಿದ್ದಾರೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಸೂರ್ಯಕಾಂತಿ ಎಣ್ಣೆಯು ಎಲ್ಲಾ ಅಡುಗೆ ಎಣ್ಣೆ ಆಮದುಗಳಲ್ಲಿ ಸುಮಾರು ಶೇ 15 ರಷ್ಟು ಪಾಲು ಹೊಂದಿದೆ.

ADVERTISEMENT

‘ಕರ್ನಾಟಕವು 25,000–30,000 ಟನ್‌ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ. ಪೂರೈಕೆಯಲ್ಲಿನ ಕೊರತೆಯು ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಸೂರ್ಯಕಾಂತಿ ಎಣ್ಣೆಯ ಸಗಟು ದರ ಲೀಟರ್‌ಗೆ ₹40ರಷ್ಟು ಏರಿಕೆಯಾಗಿದೆ. ಆದರೆ ಇದು ಇನ್ನೂ ಸಂಪೂರ್ಣವಾಗಿ ಚಿಲ್ಲರೆ ಮಾರುಕಟ್ಟೆ ಮೇಲೆ ಪರಿಣಾಮ ಬೀರಿಲ್ಲ’ ಎಂದುಯಲಹಂಕದ ಕೃಷ್ಣಂ ಆಯಿಲ್ ಟ್ರೇಡರ್ಸ್ ನ ಕೃಷ್ಣಂ ಶಶಿಧರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.