
ಸ್ವಿಗ್ಗಿ
ರಾಯಿಟರ್ಸ್ ಚಿತ್ರ
ನವದೆಹಲಿ: ಆರೋಗ್ಯದ ಮೇಲೆ ಹೆಚ್ಚಿನ ಗಮನ ನೀಡುವ ಗ್ರಾಹಕರನ್ನು ಗಮನದಲ್ಲಿ ಇರಿಸಿಕೊಂಡು ‘ಈಟ್‌ರೈಟ್’ ಹೆಸರಿನ ಸೇವೆಯನ್ನು ಐವತ್ತು ನಗರಗಳಲ್ಲಿ ಆರಂಭಿಸಿರುವುದಾಗಿ ಸ್ವಿಗ್ಗಿ ಸೋಮವಾರ ಹೇಳಿದೆ.
ಈ ಸೌಲಭ್ಯದ ಅಡಿಯಲ್ಲಿ ಗ್ರಾಹಕರಿಗೆ ಹೆಚ್ಚು ಪ್ರೊಟೀನ್ ಇರುವ, ಕಡಿಮೆ ಕ್ಯಾಲರಿಯ, ಹೆಚ್ಚುವರಿಯಾಗಿ ಸಕ್ಕರೆಯನ್ನು ಸೇರಿಸಿಲ್ಲದ ಖಾದ್ಯಗಳನ್ನು ಒದಗಿಸಲಾಗುತ್ತದೆ ಎಂದು ಸ್ವಿಗ್ಗಿ ಪ್ರಕಟಣೆ ತಿಳಿಸಿದೆ.
ಆರೋಗ್ಯಕ್ಕೆ ಪೂರಕವಾದ ಆಹಾರವನ್ನು ಮನೆಬಾಗಿಲಿಗೆ ತರಿಸಿಕೊಳ್ಳುವಲ್ಲಿ ಎರಡನೆಯ ಹಂತದ ನಗರಗಳು ಒಂದು ವರ್ಷದಲ್ಲಿ ಎರಡು ಪಟ್ಟು ಹೆಚ್ಚು ಬೆಳವಣಿಗೆ ದಾಖಲಿಸಿವೆ. ಚಂಡೀಗಢ, ಗುವಾಹಟಿ, ಲೂಧಿಯಾನಾ ಮತ್ತು ಭುವನೇಶ್ವರ ಇದರಲ್ಲಿ ಮುಂದಿವೆ ಎಂದು ಸ್ವಿಗ್ಗಿ ತಿಳಿಸಿದೆ.
‘ಈಟ್‌ರೈಟ್’ ಸೌಲಭ್ಯದ ಅಡಿಯಲ್ಲಿ ಎರಡು ಲಕ್ಷಕ್ಕೂ ಹೆಚ್ಚಿನ ರೆಸ್ಟಾರೆಂಟ್‌ಗಳಿಂದ 18 ಲಕ್ಷಕ್ಕೂ ಹೆಚ್ಚಿನ ಖಾದ್ಯಗಳನ್ನು ತರಿಸಿಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.