
ಟಾಟಾ ಮೋಟರ್ಸ್
ನವದೆಹಲಿ: ಟಾಟಾ ಮೋಟರ್ಸ್‌ನ ಅಂಗ ಸಂಸ್ಥೆಗಳಾದ ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ (ಟಿಎಂಪಿವಿ) ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ (ಟಿಪಿಇಎಂ) ತನ್ನ ಪ್ರಯಾಣಿಕ ಮತ್ತು ಎಲೆಕ್ಟ್ರಿಕ್ ವಾಹನ ಡೀಲರ್‌ಗಳಿಗೆ ಹಣಕಾಸು ಸೌಲಭ್ಯ ಒದಗಿಸಲು ಬಜಾಜ್ ಫೈನಾನ್ಸ್‌ನೊಂದಿಗೆ ಕೈಜೋಡಿಸಿದೆ.
ಈ ಒಪ್ಪಂದದಿಂದ ಟಿಎಂಪಿವಿ ಮತ್ತು ಟಿಪಿಇಎಂ ಡೀಲರ್‌ಗಳು ಬಜಾಜ್ ಫೈನಾನ್ಸ್‌ನಿಂದ ಹಣಕಾಸಿನ ನೆರವು ಪಡೆಯಲು ಅನುಕೂಲವಾಗಲಿದೆ ಎಂದು ಕಂಪನಿ ತಿಳಿಸಿದೆ.
ಬಜಾಜ್ ಫೈನಾನ್ಸ್‌ನೊಂದಿಗಿನ ಈ ಪಾಲುದಾರಿಕೆ ಡೀಲರ್‌ಗಳ ಸಂಖ್ಯೆಯನ್ನು ಹೆಚ್ಚಿಸಲಿದೆ ಎಂದು ಟಿಪಿಇಎಂನ ಸಿಎಫ್‌ಒ ಮತ್ತು ಟಿಎಂಪಿವಿನ ನಿರ್ದೇಶಕ ಧೀಮನ್ ಗುಪ್ತಾ ಹೇಳಿದ್ದಾರೆ.
ಟಿಎಂಪಿವಿ ಮತ್ತು ಟಿಪಿಇಎಂನ ಅಧಿಕೃತ ಪ್ರಯಾಣಿಕ ಮತ್ತು ಎಲೆಕ್ಟ್ರಿಕ್ ವಾಹನ ಡೀಲರ್‌ಗಳಿಗೆ ಹಣಕಾಸಿನ ಸೌಲಭ್ಯ ಒದಗಿಸಲಾಗುವುದು. ಈ ಸಹಯೋಗವು ವಿತರಕರಿಗೆ ಪ್ರಯೋಜನವನ್ನು ನೀಡುವುದಲ್ಲದೆ, ಭಾರತದಲ್ಲಿ ವಾಹನ ಉದ್ಯಮದ ಬೆಳವಣಿಗೆಗೆ ಕೊಡುಗೆ ನೀಡುತ್ತದೆ ಎಂದು ಬಜಾಜ್ ಫೈನಾನ್ಸ್ ಉಪ ವ್ಯವಸ್ಥಾಪಕ ನಿರ್ದೇಶಕ ಅನುಪ್ ಸಹಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.