ADVERTISEMENT

ಬೆಂಗಳೂರು: ಟಾಟಾ ಮೋಟರ್ಸ್‌ನಿಂದ ಹೊಸ ರೂಪದಲ್ಲಿ ಸಫಾರಿ, ಹ್ಯಾರಿಯರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2023, 12:56 IST
Last Updated 17 ಅಕ್ಟೋಬರ್ 2023, 12:56 IST
ಕಂಪನಿಯ ಪ್ರಯಾಣಿಕ ವಾಹನಗಳ ವಿಭಾಗದ ಕಾವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಹೊಸ ಸಫಾರಿ ಬಿಡುಗಡೆ ಮಾಡಿದರು.
ಕಂಪನಿಯ ಪ್ರಯಾಣಿಕ ವಾಹನಗಳ ವಿಭಾಗದ ಕಾವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಹೊಸ ಸಫಾರಿ ಬಿಡುಗಡೆ ಮಾಡಿದರು.   

ಬೆಂಗಳೂರು: ಟಾಟಾ ಮೋಟರ್ಸ್‌ ಕಂಪನಿಯು ದೇಶದ ಮಾರುಕಟ್ಟೆಗೆ ಹೊಸ ರೂಪದಲ್ಲಿ ಸಫಾರಿ ಮತ್ತು ಹ್ಯಾರಿಯರ್‌ ಎಸ್‌ಯುವಿಗಳನ್ನು ಬಿಡುಗಡೆ ಮಾಡಿದೆ. ಪರಿಚಯಾತ್ಮಕ ಬೆಲೆ ಕ್ರಮವಾಗಿ ₹16.19 ಲಕ್ಷ ಮತ್ತು ₹ 15.49 ಇದೆ.

ಹೊಸ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನಗಳೊಂದಿಗೆ ಈ ಎರಡೂ ಮಾದರಿಗಳು ಚಾಲನಾ ಅನುಭವವನ್ನು ಇನ್ನಷ್ಟು ಸುಧಾರಿಸಲಿವೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಎರಡೂ ಮಾದರಿಗಳು ಜಿಎನ್‌ಸಿಎಪಿ 5 ಸ್ಟಾರ್‌ ರೇಟಿಂಗ್‌ ಪಡೆದುಕೊಂಡಿವೆ. 7 ಏರ್‌ಬ್ಯಾಗ್‌, 31.24 ಸಿಎಂ ಹರ್ಮಾನ್‌ ಟಚ್‌ಸ್ಕ್ರೀನ್‌ ಎನ್ಫೊಟೇನ್ಮೆಂಟ್‌ ಸಿಸ್ಟಂ ಸೇರಿದಂತೆ ಇನ್ನೂ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿವೆ ಎಂದು ಕಂಪನಿ ಹೇಳಿದೆ.

ADVERTISEMENT
ಕಂಪನಿಯ ಪ್ರಯಾಣಿಕ ವಾಹನಗಳ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಹೊಸ ಹ್ಯಾರಿಯರ್‌ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.