ADVERTISEMENT

ಟಾಟಾ ಮೋಟರ್ಸ್‌ಗೆ ₹3,483 ಕೋಟಿ ನಷ್ಟ

ಪಿಟಿಐ
Published 5 ಫೆಬ್ರುವರಿ 2026, 14:27 IST
Last Updated 5 ಫೆಬ್ರುವರಿ 2026, 14:27 IST
<div class="paragraphs"><p>ಟಾಟಾ ಮೋಟರ್ಸ್‌</p></div>

ಟಾಟಾ ಮೋಟರ್ಸ್‌

   

ನವದೆಹಲಿ: ಟಾಟಾ ಮೋಟರ್ಸ್‌ ಪ್ಯಾಸೆಂಜರ್ ವೆಹಿಕಲ್ಸ್ ಕಂಪನಿಯು ಡಿಸೆಂಬರ್‌ ತ್ರೈಮಾಸಿಕದಲ್ಲಿ ₹3,483 ಕೋಟಿ ನಷ್ಟ ಕಂಡಿದೆ. ಕಂಪನಿಯ ಅಂಗಸಂಸ್ಥೆಯಾದ ಬ್ರಿಟನ್ನಿನ ಜಾಗ್ವಾರ್ ಲ್ಯಾಂಡ್‌ ರೋವರ್‌ನಲ್ಲಿ ವರದಿಯಾದ ಸೈಬರ್ ಪ್ರಕರಣವು ಈ ಪ್ರಮಾಣದ ನಷ್ಟಕ್ಕೆ ಪ್ರಮುಖ ಕಾರಣ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹5,485 ಕೋಟಿ ಲಾಭ ಗಳಿಸಿತ್ತು. ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ವರಮಾನ ₹70,108 ಕೋಟಿ ಆಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹94,472 ಕೋಟಿ ಆಗಿತ್ತು.

ADVERTISEMENT

‘ಜಾಗ್ವಾರ್‌ ಲ್ಯಾಂಡ್‌ ರೋವರ್‌ನಲ್ಲಿನ ಸೈಬರ್‌ ಪ್ರಕರಣದ ಪರಿಣಾಮವು ಮುಂದುವರಿದಿದ್ದರಿಂದಾಗಿ ಈ ತ್ರೈಮಾಸಿಕವು ಬಹಳ ಸವಾಲಿನದ್ದಾಗಿತ್ತು. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ ಭಾರತದಲ್ಲಿನ ವಹಿವಾಟುಗಳಲ್ಲಿ ಬಹಳ ಸುಧಾರಣೆ ಆಗಿದೆ’ ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಧೀಮನ್ ಗುಪ್ತ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.