ನವದೆಹಲಿ: ಆಜೀವ ಟ್ರಸ್ಟಿಯಾಗಿ ಮೆಹ್ಲಿ ಮಿಸ್ತ್ರಿ ಅವರನ್ನು ಮರುನೇಮಿಸಲು ಟಾಟಾ ಟ್ರಸ್ಟ್ಸ್ ಮುಂದಾಗಿದೆ. ಈ ಕುರಿತ ಪ್ರಸ್ತಾವ ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸರ್ ರತನ್ ಟಾಟಾ ಟ್ರಸ್ಟ್, ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಮತ್ತು ಬಾಯಿ ಹಿರಾಬಾಯಿ ಜೆಮ್‌ಶೆಡ್‌ಜೀ ಟಾಟಾ ನವ್‌ಸರಿ ಚಾರಿಟಬಲ್ ಇನ್‌ಸ್ಟಿಟ್ಯೂಷನ್ಸ್‌ಗೆ ಮಿಸ್ತ್ರಿ ಅವರನ್ನು ಮರುನೇಮಕ ಮಾಡಲು ಟಾಟಾ ಟ್ರಸ್ಟ್‌ನ ಸಿಇಒ, ಟಾಟಾ ಟ್ರಸ್ಟ್‌ನ ಇತರೆ ಟ್ರಸ್ಟಿಗಳಿಗೆ ಪ್ರಸ್ತಾವವನ್ನು ಗುರುವಾರ ಕಳುಹಿಸಿದ್ದಾರೆ.
ದಿವಂಗತ ರತನ್ ಟಾಟಾ ಅವರ ಆತ್ಮೀಯರಾಗಿದ್ದ ಮಿಸ್ತ್ರಿ ಅವರು 2022ರಲ್ಲಿ ಮೊದಲ ಬಾರಿಗೆ ಟಾಟಾ ಟ್ರಸ್ಟ್‌ಗೆ ಮೂರು ವರ್ಷದ ಅವಧಿಗೆ ನೇಮಕವಾಗಿದ್ದರು. ಈ ಅವಧಿ ಅಕ್ಟೋಬರ್ 28ರಂದು ಕೊನೆಗೊಳ್ಳಲಿದೆ. ಟಾಟಾ ಟ್ರಸ್ಟ್ಸ್ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.
ಈ ವಾರದ ಆರಂಭದಲ್ಲಿ ವೇಣು ಶ್ರೀನಿವಾಸನ್ ಅವರನ್ನು ಆಜೀವ ಸದಸ್ಯರನ್ನಾಗಿ ಟಾಟಾ ಟ್ರಸ್ಟ್ಸ್ ಸರ್ವಾನುಮತದಿಂದ ಮರುನೇಮಕ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.