ADVERTISEMENT

ವಾಹನ | ಥರ್ಡ್‌ ಪಾರ್ಟಿ ವಿಮೆ ಕಂತು ಜೂನ್‌ 1ರಿಂದ ಹೆಚ್ಚಳ: ಸಾರಿಗೆ ಸಚಿವಾಲಯ

ಪಿಟಿಐ
Published 26 ಮೇ 2022, 18:46 IST
Last Updated 26 ಮೇ 2022, 18:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಾರು, ದ್ವಿಚಕ್ರ ವಾಹನ ಮತ್ತು ಸರಕು ಸಾಗಣೆ ವಾಹನಗಳ ಥರ್ಡ್‌ ಪಾರ್ಟಿ ವಿಮೆಯ ಕಂತು ಜೂನ್‌ 1ರಿಂದ ಹೆಚ್ಚಾಗಲಿದೆ.

ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪರಿಷ್ಕೃತ ಅಧಿಸೂಚನೆ ಹೊರಡಿಸಿದೆ. ಇದೇ ಮೊದಲ ಬಾರಿಗೆ ರಸ್ತೆ ಸಾರಿಗೆ ಸಚಿವಾಲಯವು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದೊಂದಿಗೆ (ಐಆರ್‌ಡಿಎಐ) ಸಮಾಲೋಚನೆ ನಡೆಸಿ ಥರ್ಡ್‌ ಪಾರ್ಟಿ ವಿಮೆ ಮೊತ್ತವನ್ನು ನಿರ್ಧರಿಸಿದೆ. ಈ ಮೊದಲು ವಿಮೆ ಕಂತು ಹೆಚ್ಚಳದ ಅದಿಸೂಚನೆಯನ್ನು ಐಆರ್‌ಡಿಎಐ ಹೊರಡಿಸುತ್ತಿತ್ತು.

ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದಾಗಿ ಎರಡು ವರ್ಷಗಳವರೆಗೆ ಥರ್ಡ್‌ ಪಾರ್ಟಿ ವಿಮೆ ಕಂತಿನ ಪರಿಷ್ಕರಣೆಯನ್ನು ತಡೆಹಿಡಿಯಲಾಗಿತ್ತು.

ADVERTISEMENT

ಸರಕು ಮತ್ತು ಪ್ರಯಾಣಿಕರನ್ನು ಸಾಗಿಸುವ ವಾಣಿಜ್ಯ ವಾಹನಗಳ ಥರ್ಡ್‌ ಪಾರ್ಟಿ ಪ್ರೀಮಿಯಂ ಮೊತ್ತ ಹೆಚ್ಚಳದ ನಿರ್ಧಾರವು ಅನವಶ್ಯಕ ಎನ್ನುವುದು ರಸ್ತೆ ಸಾರಿಗೆ ಸಂಘದ ಸರ್ವಾನುಮತದ ಅಭಿಪ್ರಾಯ ಎಂದು ಆಲ್‌ ಇಂಡಿಯಾ ಮೋಟಾರ್‌ ಟ್ರಾನ್ಸ್‌ಪೋರ್ಟ್‌ ಕಾಂಗ್ರೆಸ್‌ (ಎಐಎಂಟಿಸಿ) ಅಧ್ಯಕ್ಷ ಕುಲತರಣ್‌ ಸಿಂಗ್‌ ಅತ್ವಾಲ್‌ ಹೇಳಿದ್ದಾರೆ.

ವಿಮೆ ಎಷ್ಟು ಕಂತು
* 30 ಕಿಲೋವಾಟ್‌ ಒಳಗಿನ ವಿದ್ಯುತ್ ಚಾಲಿತ ಕಾರು; ₹ 1,780
* 30 ಕಿಲೋವಾಟ್‌ಗಿಂತ ಹೆಚ್ಚು 60 ಕಿಲೋವಾಟ್‌ಗಿಂತ ಕಡಿಮೆ; ₹ 2,904
* ಹೈಬ್ರಿಡ್‌ ಎಲೆಕ್ಟ್ರಿಕ್‌ ವಾಹನಗಳಿಗೆ ಶೇ 7.5ರಷ್ಟು ರಿಯಾಯಿತಿ
* ವಿದ್ಯುತ್ ಚಾಲಿತ ವಾಹನಗಳಿಗೆ ಶೇ 15ರಷ್ಟು ರಿಯಾಯಿತಿ
* ಶಿಕ್ಷಣ ಸಂಸ್ಥೆಗಳಲ್ಲಿ ಬಳಸುವ ಬಸ್‌ಗಳಿಗೆ ವಿಮಾ ಕಂತಿನಲ್ಲಿ ಶೇ 15ರಷ್ಟು ರಿಯಾಯಿತಿ
* ವಿಂಟೇಜ್‌ ಕಾರು ಎಂದು ನೋಂದಣಿ ಆಗಿರುವ ಖಾಸಗಿ ಕಾರುಗಳಿಗೆ ಪ್ರೀಮಿಯಂ ಮೊತ್ತದಲ್ಲಿ ಶೇ 50ರಷ್ಟು ರಿಯಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.