ADVERTISEMENT

ಟೊಮೆಟೊ ಕೆ.ಜಿಗೆ ಗರಿಷ್ಠ ₹ 72ವರೆಗೂ ಏರಿಕೆ

ಪಿಟಿಐ
Published 13 ಅಕ್ಟೋಬರ್ 2021, 12:39 IST
Last Updated 13 ಅಕ್ಟೋಬರ್ 2021, 12:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಮಹಾನಗರಗಳ ಚಿಲ್ಲರೆ ಮಾರುಕಟ್ಟೆಗಳಲ್ಲಿ ಟೊಮೆಟೊ ದರವು ಕೆ.ಜಿ.ಗೆ ₹ 72ರವರೆಗೂ ಏರಿಕೆ ಆಗಿದೆ. ಕೋಲ್ಕತ್ತದಲ್ಲಿ ಮಂಗಳವಾರ ಕೆ.ಜಿ ಟೊಮೆಟೊ ಬೆಲೆ ₹ 72ರಷ್ಟು ಇತ್ತು. ಕಳೆದ ತಿಂಗಳ ಇದೇ ಅವಧಿಯಲ್ಲಿ ಕೆ.ಜಿ.ಗೆ ₹ 38ರಂತೆ ಮಾರಾಟ ಆಗಿತ್ತು. ದೆಹಲಿ ಮತ್ತು ಚೆನ್ನೈನಲ್ಲಿ ಕೆ.ಜಿ.ಗೆ ₹ 57ಕ್ಕೆ ಏರಿಕೆ ಆಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿ–ಅಂಶವು ತಿಳಿಸಿದೆ.

ಮುಂಬೈನಲ್ಲಿ ಚಿಲ್ಲರೆ ಮಾರಾಟ ದರ ಕೆ.ಜಿಗೆ ₹ 15 ರಷ್ಟು ಇದ್ದಿದ್ದು ₹ 53ಕ್ಕೆ ಏರಿಕೆ ಆಗಿದೆ. ಟೊಮೆಟೊ ಬೆಳೆಯುವ ಪ್ರಮುಖ ರಾಜ್ಯಗಳಾದ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಅಕಾಲಿಕ ಮಳೆ ಸುರಿದು ಆಗಿರುವ ಬೆಳೆ ಹಾನಿ ಹಾಗೂ ಪೂರೈಕೆ ಕೊರತೆಯೇ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ವರ್ತಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT