
ಪಿಟಿಐ
ನವದೆಹಲಿ: ವಾಹನ ತಯಾರಿಕಾ ಕಂಪನಿ ಟೊಯೊಟ ಕಿರ್ಲೋಸ್ಕರ್ ಮೋಟರ್, ತನ್ನ ಮಧ್ಯಮ ಗಾತ್ರದ ಎಸ್‌ಯುವಿ ಅರ್ಬನ್ ಕ್ರೂಸರ್ ಹೈರೈಡರ್ ಮಾದರಿಯ 11,529 ವಾಹನಗಳಲ್ಲಿ ದೋಷಪೂರಿತ ಕಾಂಬಿನೇಷನ್ ಮೀಟರ್ ಬದಲಾವಣೆಗೆ ಮುಂದಾಗಿದೆ.
2024ರ ಡಿಸೆಂಬರ್ 9ರಿಂದ 2025ರ ಏಪ್ರಿಲ್ 29ರವರೆಗೆ ತಯಾರಾದ ಇಷ್ಟು ಸಂಖ್ಯೆಯ ವಾಹನಗಳನ್ನು ಹಿಂದಕ್ಕೆ ಪಡೆದು, ಪರಿಶೀಲಿಸಲಾಗುತ್ತದೆ ಎಂದು ಕಂಪನಿಯು ಶುಕ್ರವಾರ ತಿಳಿಸಿದೆ.
ಈ ವಾಹನಗಳ ಪೈಕಿ ಕೆಲವು ವಾಹನಗಳಲ್ಲಿ ಸ್ಪಿಡೋ ಮೀಟರ್ ಒಳಗೊಂಡ ಕಾಂಬಿನೇಷನ್ ಮೀಟರ್ ಸರಿಯಾಗಿ ಕಾರ್ಯನಿರ್ವಹಿಸದಿರುವ ಕುರಿತು ಕಂಪನಿ ಸಂದೇಹ ವ್ಯಕ್ತಪಡಿಸಿದೆ. ಮೀಟರ್ ದೋಷಪೂರಿತ ಎಂದು ಕಂಡು ಬಂದಲ್ಲಿ ಬದಲಾಯಿಸಿ ಕೊಡಲಾಗುವುದು. ಸಂಬಂಧಪಟ್ಟ ವಾಹನ ಮಾಲೀಕರಿಗೆ ಟೊಯೊಟ ಡೀಲರ್‌ಗಳಿಂದ ಸಂದೇಶ ಬರಲಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.