ADVERTISEMENT

ಟ್ರೆಂಡ್ಸ್‌ನಲ್ಲಿ ವಿಶೇಷ ಕೊಡುಗೆ ಆರಂಭ

ಪಿಟಿಐ
Published 28 ನವೆಂಬರ್ 2024, 12:58 IST
Last Updated 28 ನವೆಂಬರ್ 2024, 12:58 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ‘ಬ್ಲ್ಯಾಕ್‌ ಫ್ರೈಡೇ’ ಆಚರಣೆ ಅಂಗವಾಗಿ ರಿಲಯನ್ಸ್‌ನ ಟ್ರೆಂಡ್ಸ್‌, ತನ್ನ ಮಳಿಗೆಗಳಲ್ಲಿ ಉಡುಪು ಖರೀದಿಸುವ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ.

₹3,499 ಮೌಲ್ಯದ ಉಡುಪುಗಳನ್ನು ಖರೀದಿಸಿದವರಿಗೆ ₹2 ಸಾವಿರ ಮೌಲ್ಯದ ಉತ್ಪನ್ನಗಳನ್ನು ಉಚಿತವಾಗಿ ನೀಡಲಿದೆ. ಈ ವಿಶೇಷ ಕೊಡುಗೆಯು ನವೆಂಬರ್‌ 28ರಿಂದ ಡಿಸೆಂಬರ್‌ 1ರ ವರೆಗೆ ಇರಲಿದೆ ಎಂದು ಕಂಪನಿ ತಿಳಿಸಿದೆ.

ಗ್ರಾಹಕರು ಹತ್ತಿರದ ಟ್ರೆಂಡ್ಸ್‌ ಮಳಿಗೆಗಳಿಗೆ ಭೇಟಿ ನೀಡಿ ಈ ಕೊಡುಗೆಯ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದೆ.

ADVERTISEMENT

ಏನಿದು ಬ್ಲ್ಯಾಕ್ ಫ್ರೈಡೇ?:

ಬ್ಲ್ಯಾಕ್ ಫ್ರೈಡೇ ಎಂಬುದು ರಜಾ ದಿನಗಳ ಆರಂಭದ ಸೂಚಕವಾಗಿದೆ. ಸಾಮಾನ್ಯವಾಗಿ ಅಮೆರಿಕದಲ್ಲಿ  ಥ್ಯಾಂಕ್ಸ್ ಗೀವಿಂಗ್  ಡೇ ಆದ ಮಾರನೇ ದಿನ ಅಂದರೆ ನವೆಂಬರ್ ತಿಂಗಳ ನಾಲ್ಕನೇ ಗುರುವಾರ ನಡೆಯುತ್ತದೆ. ಬ್ಲ್ಯಾಕ್ ಫ್ರೈಡೇ ಎಂಬುದು ಆರಂಭವಾಗಿದ್ದು ಅಮೆರಿಕದಲ್ಲಿ. ಆ ನಂತರ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.