ನವದೆಹಲಿ: ಜೂನ್ ತ್ರೈಮಾಸಿಕದಲ್ಲಿ ಟಿವಿಎಸ್ ಮೋಟರ್ ಕಂಪನಿಯ ಒಟ್ಟು ನಿವ್ವಳ ಲಾಭವು ₹ 297 ಕೋಟಿ ಆಗಿದೆ. ಹಿಂದಿನ ವರ್ಷದ ಜೂನ್ ತ್ರೈಮಾಸಿಕದಲ್ಲಿ ಕಂಪನಿಯು ₹ 15 ಕೋಟಿ ನಷ್ಟ ಅನುಭವಿಸಿತ್ತು.
ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ತಯಾರಿಕಾ ವಲಯದ ಪ್ರಮುಖ ಕಂಪನಿಯಾಗಿರುವ ಟಿವಿಎಸ್, ಜೂನ್ ತ್ರೈಮಾಸಿಕದಲ್ಲಿ ₹ 7,348 ಕೋಟಿ ವರಮಾನ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯ ವರಮಾನವು ₹ 4,692 ಕೋಟಿ ಆಗಿತ್ತು.
ಈ ವರ್ಷದ ಜೂನ್ ತ್ರೈಮಾಸಿಕದ ಹಣಕಾಸಿನ ಫಲಿತಾಂಶವನ್ನು ಹಿಂದಿನ ವರ್ಷದ ಜೂನ್ ತ್ರೈಮಾಸಿಕದ ಜೊತೆ ಹೋಲಿಸುವುದು ಸರಿಯಾಗದು ಎಂದು ಕಂಪನಿ ಹೇಳಿದೆ. ಹಿಂದಿನ ವರ್ಷದ ಜೂನ್ ತ್ರೈಮಾಸಿಕದಲ್ಲಿ ಲಾಕ್ಡೌನ್ ಕ್ರಮಗಳು ಜಾರಿಯಲ್ಲಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.