ADVERTISEMENT

ಇ.ವಿ. ಚಾರ್ಜಿಂಗ್‌: ಟಾಟಾ ಪವರ್‌ ಜೊತೆ ಟಿವಿಎಸ್‌ ಒಪ್ಪಂದ

ಪಿಟಿಐ
Published 5 ಅಕ್ಟೋಬರ್ 2021, 13:55 IST
Last Updated 5 ಅಕ್ಟೋಬರ್ 2021, 13:55 IST
ಐಕ್ಯೂಬ್‌–ಸಾಂದರ್ಭಿಕ ಚಿತ್ರ
ಐಕ್ಯೂಬ್‌–ಸಾಂದರ್ಭಿಕ ಚಿತ್ರ   

ನವದೆಹಲಿ: ಟಿವಿಎಸ್‌ ಮೋಟರ್‌ ಕಂಪನಿಯು ವಿದ್ಯುತ್ ಚಾಲಿತ (ಇ.ವಿ) ವಾಹನಗಳಿಗೆ ದೇಶದಾದ್ಯಂತ ಚಾರ್ಜಿಂಗ್‌ ಮೂಲಸೌಕರ್ಯ ಅಳವಡಿಕೆಗಾಗಿ ಟಾಟಾ ಪವರ್‌ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.

ದೇಶದಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆ ಹೆಚ್ಚಿಸಲು ದ್ವಿಚಕ್ರ ವಾಹನಗಳಿಗೆ ಅಗತ್ಯವಿರುವ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದು ಈ ಪಾಲುದಾರಿಕೆಯ ಮುಖ್ಯ ಗುರಿ ಎಂದು ಟಿವಿಎಸ್‌ ಮೋಟರ್‌ ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಟಿವಿಎಸ್‌ ಮೋಟರ್‌ನ ಕಸ್ಟಮರ್‌ ಕನೆಕ್ಟ್‌ ಆ್ಯಪ್‌ ಮತ್ತು ಟಾಟಾ ಪವರ್‌ ಇಜೆಡ್‌ ಚಾರ್ಜ್‌ ಆ್ಯಪ್‌ ಮೂಲಕ ‘ಟಿವಿಎಸ್‌ ಐಕ್ಯೂಬ್‌ ಎಲೆಕ್ಟ್ರಿಕ್‌’ಗೆ ಚಾರ್ಜಿಂಗ್‌ ಸೌಲಭ್ಯವು ಸಿಗಲಿದೆ. ಇದರಿಂದಾಗಿ, ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಗಳಿಗೆ ಸಾಮಾನ್ಯ ಎ.ಸಿ ಚಾರ್ಜಿಂಗ್‌ ಮತ್ತು ವೇಗದ ಡಿ.ಸಿ ಚಾರ್ಜಿಂಗ್‌ ಸೌಲಭ್ಯ ಲಭ್ಯವಾಗಲಿದೆ ಎಂದು ಹೇಳಿದೆ.

ADVERTISEMENT

ಟಾಟಾ ಪವರ್‌ ಕಂಪನಿಯು ಸದ್ಯ ದೇಶದ 120ಕ್ಕೂ ಹೆಚ್ಚಿನ ನಗರಗಳ 5 ಸಾವಿರಕ್ಕೂ ಅಧಿಕ ಮನೆಗಳಲ್ಲಿ ಚಾರ್ಜ್‌ ಮಾಡುವ ಮತ್ತು 700ಕ್ಕೂ ಅಧಿಕ ಸಾರ್ವಜನಿಕ ಚಾರ್ಜಿಂಗ್‌ ಜಾಲವನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.