ADVERTISEMENT

ಎಂಎಸ್‌ಎಂಇ ಉದ್ದಿಮೆಗಳಿಗೆ ಯುಪಿಐ ಆಧಾರಿತ ಸಾಲ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2023, 16:14 IST
Last Updated 7 ಏಪ್ರಿಲ್ 2023, 16:14 IST

ಬೆಂಗಳೂರು: ಬ್ಯಾಂಕೇತರ ಹಣಕಾಸು ಸಂಸ್ಥೆ ‘ಯುಗ್ರೊ ಕ್ಯಾಪಿಟಲ್’, ಎಂಎಸ್‌ಎಂಇ (ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ) ಉದ್ಯಮಗಳಿಗೆ ಯುಪಿಐ ಆಧಾರಿತ ಸಾಲ ಸೌಲಭ್ಯವನ್ನು ಆರಂಭಿಸುತ್ತಿರುವುದಾಗಿ ಹೇಳಿದೆ.

ಸಣ್ಣ ಉದ್ಯಮಗಳ ಮಾಲೀಕರು, ರಿಟೇಲ್ ವ್ಯಾಪಾರಿಗಳು, ಸಣ್ಣ ಪ್ರಮಾಣದ ತಯಾರಕರಿಗೆ ಯಾವುದೇ ಅಡಮಾನ ಇಲ್ಲದೆ ಕಾರ್ಯಾಚರಣೆ ಬಂಡವಾಳದ ರೂಪದಲ್ಲಿ ಸಾಲವನ್ನು ಪಡೆಯಲು ಇದು ಸಹಾಯ ಮಾಡುತ್ತದೆ ಎಂದು ಪ್ರಕಟಣೆ ತಿಳಿಸಿದೆ.

‘ಎಂಎಸ್‌ಎಂಇ ವಲಯದ ಉದ್ದಿಮೆಗಳಿಗೆ ನಾವು ಅಲ್ಪಾವಧಿ ಸಾಲವನ್ನು ವಿಳಂಬವಿಲ್ಲದೆ ಮಂಜೂರು ಮಾಡುತ್ತೇವೆ. ಎಂಎಸ್‌ಎಂಇ ಉದ್ದಿಮೆಗಳು ಈ ಸಾಲವನ್ನು ಯುಪಿಐ ವ್ಯವಸ್ಥೆ ಬಳಸಿ ಪಡೆದುಕೊಳ್ಳಬಹುದು. ತಾವು ಹಣವನ್ನು ಬಳಸಿಕೊಂಡ ಅವಧಿಗೆ ಮಾತ್ರ ಬಡ್ಡಿ ಪಾವತಿಸಿದರೆ ಸಾಕು. ಇದರಿಂದಾಗಿ ಈ ಸಾಲಗಳು ದುಬಾರಿ ಆಗುವುದಿಲ್ಲ’ ಎಂದು ಕಂಪನಿಯ ಅಧಿಕಾರಿ ಅಮಿತ್ ಎಂ. ಹೇಳಿದ್ದಾರೆ.

ADVERTISEMENT

ಮುಂದಿನ ಮೂರು ವರ್ಷಗಳಲ್ಲಿ ಒಟ್ಟು 10 ಲಕ್ಷಕ್ಕಿಂತ ಹೆಚ್ಚಿನ ಗ್ರಾಹಕರಿಗೆ ಸಾಲ ವಿತರಣೆ ಮಾಡುವ ಗುರಿಯನ್ನು ಕಂಪನಿ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.