ADVERTISEMENT

ಸುಸ್ಥಿರ ಅಭಿವೃದ್ಧಿ ಗುರಿ ಈಡೇರಿಕೆಗೆ ಮಾನಸಿ ಕಿರ್ಲೋಸ್ಕರ್‌ ನೇಮಕ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 17:13 IST
Last Updated 17 ಅಕ್ಟೋಬರ್ 2018, 17:13 IST
ಮಾನಸಿ
ಮಾನಸಿ   

ಬೆಂಗಳೂರು: ಕಿರ್ಲೋಸ್ಕರ್ ಸಿಸ್ಟಮ್ಸ್ ಲಿಮಿಟೆಡ್‍ನ ಸಿಇಒ ಮಾನಸಿ ಕಿರ್ಲೋಸ್ಕರ್ ಅವರನ್ನು ಸುಸ್ಥಿರ ಅಭಿವೃದ್ಧಿ ಗುರಿ (ಎಸ್‍ಡಿಜಿ) ಈಡೇರಿಕೆಗಾಗಿ ವಿಶ್ವಸಂಸ್ಥೆಯು ಇದೇ ಮೊದಲ ಬಾರಿಗೆ ಭಾರತದಲ್ಲಿ `ಯುವ ಉದ್ಯಮ ಸಾಧಕಿ' (ಯಂಗ್ ಬಿಸಿನೆಸ್ ಚಾಂಪಿಯನ್) ಎಂದು ನೇಮಕ ಮಾಡಿದೆ.

ಪ್ರವರ್ಧಮಾನಕ್ಕೆ ಬರುತ್ತಿರುವ ಯುವ ಉದ್ಯಮ ಸಾಧಕಿಯಾಗಿರುವ ಮಾನಸಿ ಕಿರ್ಲೋಸ್ಕರ್ ಅವರು, ‘ಎಸ್‍ಡಿಜಿ' ಈಡೇರಿಸುವ ನಿಟ್ಟಿನಲ್ಲಿ ಕಾರ್ಪೊರೇಟ್ ಸಿಇಒಗಳ ಮಧ್ಯೆ ಸಮನ್ವಯ ಸಾಧಿಸಿ ಸಮರ್ಥವಾಗಿ ಕಾರ್ಯನಿರ್ವಹಿಸುವ ವಿಶಿಷ್ಟ ಸಾಮರ್ಥ್ಯ ಹೊಂದಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

‘ಭವಿಷ್ಯದ ಪೀಳಿಗೆಗಾಗಿ ಭಾರತದ ಬೆಳವಣಿಗೆಯಲ್ಲಿ ಭಾಗಿಯಾಗಲು ದೇಶಿ ಉದ್ದಿಮೆಗೆ ವಿಶಿಷ್ಟ ಅವಕಾಶ ಕಲ್ಪಿಸಿದೆ. ಸುಸ್ಥಿರ ಅಭಿವೃದ್ಧಿಗೆ ವೇಗ ನೀಡಲು ಉದ್ದಿಮೆ ಸಂಸ್ಥೆಗಳಿಂದ ಸಾಧ್ಯವಿದೆ. ನನ್ನ ಕೆಲಸಗಳ ಮೂಲಕ ಈ ಸಂದೇಶವನ್ನು ನವೋದ್ಯಮ ಸ್ಥಾಪಿಸಿರುವ ಮತ್ತು ಸ್ಟಾರ್ಟ್‍ಅಪ್‍ಗಳಲ್ಲಿ ದುಡಿಯುತ್ತಿರುವ ಉದ್ದಿಮೆಯ ಎಲ್ಲ ಯುವ ಸಾಧಕರಿಗೆ ತಲುಪಿಸಲು ಶ್ರಮಿಸುವೆ' ಎಂದು ಮಾನಸಿ ಕಿರ್ಲೋಸ್ಕರ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.