ADVERTISEMENT

UPI Transaction: ಯುಪಿಐ ವಹಿವಾಟು ₹27.28 ಲಕ್ಷ ಕೋಟಿ

ಪಿಟಿಐ
Published 3 ನವೆಂಬರ್ 2025, 14:29 IST
Last Updated 3 ನವೆಂಬರ್ 2025, 14:29 IST
ಯುಪಿಐ
ಯುಪಿಐ   

ನವದೆಹಲಿ: ಅಕ್ಟೋಬರ್ ತಿಂಗಳಿನಲ್ಲಿ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಮೂಲಕ 2,070 ಕೋಟಿ ವಹಿವಾಟುಗಳು ನಡೆದಿವೆ. ಹಣದ ಲೆಕ್ಕದಲ್ಲಿ ಒಟ್ಟು ₹27.28 ಲಕ್ಷ ಕೋಟಿಯಷ್ಟು ವಹಿವಾಟುಗಳು ನಡೆದಿವೆ ಎಂದು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಸೋಮವಾರ ತಿಳಿಸಿದೆ.

ಹಬ್ಬದ ಋತುವಿನ ಅಂಗವಾಗಿ ಖರೀದಿ ಹೆಚ್ಚಿದ ಕಾರಣದಿಂದಾಗಿ ವಹಿವಾಟು ಹೆಚ್ಚಳ ಆಗಿದೆ ಎಂದು ನಿಗಮ ತಿಳಿಸಿದೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ₹23.49 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆದಿತ್ತು. ಇದಕ್ಕೆ ಹೋಲಿಸಿದರೆ ಶೇ 16ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಹೇಳಿದೆ. ಅಕ್ಟೋಬರ್‌ನಲ್ಲಿ ದಿನನಿತ್ಯ ಸರಾಸರಿ 66.8 ಕೋಟಿ ವಹಿವಾಟುಗಳು ನಡೆದಿವೆ. ಇದರ ಮೌಲ್ಯ ದಿನಕ್ಕೆ ಸರಾಸರಿ ₹87,993 ಕೋಟಿ. 

ADVERTISEMENT

ಈ ವರ್ಷದ ಮೇ ತಿಂಗಳಿನಲ್ಲಿ ₹25.14 ಲಕ್ಷ ಕೋಟಿಯಷ್ಟು ಮೌಲ್ಯದ ವಹಿವಾಟು ನಡೆದಿತ್ತು. ಇದು ಆವರೆಗಿನ ಗರಿಷ್ಠ ಮಟ್ಟದ ವಹಿವಾಟು ನಡೆದ ತಿಂಗಳಾಗಿತ್ತು. ಆದರೆ, ಅಕ್ಟೋಬರ್ ವಹಿವಾಟು ಇದಕ್ಕಿಂತಲೂ ಹೆಚ್ಚಳವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.