ADVERTISEMENT

US Tariff On India: ವಜ್ರ ಉದ್ಯಮಕ್ಕೆ ಟ್ರಂಪ್ ಸುಂಕ ಅಡ್ಡಿ

ಪಿಟಿಐ
Published 28 ಆಗಸ್ಟ್ 2025, 15:12 IST
Last Updated 28 ಆಗಸ್ಟ್ 2025, 15:12 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ದೇಶದ ನೈಸರ್ಗಿಕ ವಜ್ರಗಳ ಪಾಲಿಶ್ ಉದ್ಯಮದ ವರಮಾನವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ 28ರಿಂದ ಶೇ 30ರಷ್ಟು ಇಳಿಕೆ ಕಾಣಲಿದೆ ಎಂದು ರೇಟಿಂಗ್‌ ಸಂಸ್ಥೆ ಕ್ರಿಸಿಲ್ ವರದಿ ಗುರುವಾರ ತಿಳಿಸಿದೆ.

ಭಾರತದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕದ ಶೇ 50ರಷ್ಟು ಸುಂಕ ಜಾರಿಯೇ ಇದಕ್ಕೆ ಕಾರಣ ಎಂದು ತಿಳಿಸಿದೆ. 

2024–25ರ ಆರ್ಥಿಕ ವರ್ಷದಲ್ಲಿ ಉದ್ಯಮದ ವರಮಾನವು ₹1.40 ಲಕ್ಷ ಕೋಟಿಯಷ್ಟಿತ್ತು. ಇದು ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹1.09 ಲಕ್ಷ ಕೋಟಿಗೆ ಇಳಿಕೆಯಾಗಬಹುದು ಎಂದು ಹೇಳಿದೆ. 

ADVERTISEMENT

ಅಮೆರಿಕ ಮತ್ತು ಚೀನಾವು ಭಾರತದ ಪ್ರಮುಖ ಮಾರುಕಟ್ಟೆಗಳಾಗಿವೆ. ಪ್ರಯೋಗಾಲಯದಲ್ಲಿ ತಯಾರಿಸಿದ ವಜ್ರಗಳಿಗೆ ಬೇಡಿಕೆ ಹೆಚ್ಚಳವಾಗಿದ್ದು, ಮಾರುಕಟ್ಟೆಯಲ್ಲಿ ಶೇ 60ರಷ್ಟನ್ನು ವಶಪಡಿಸಿಕೊಂಡಿದೆ. ಇದು ನೈಸರ್ಗಿಕ ವಜ್ರಗಳಿಗೆ ಸ್ಪರ್ಧೆಯೊಡ್ಡಿದೆ ಎಂದು ತಿಳಿಸಿದೆ. ಚೀನಾದಲ್ಲಿ ಬೇಡಿಕೆ ಕಡಿಮೆಯಾಗಿರುವುದು ಸಹ ವರಮಾನ ಕಡಿಮೆ ಆಗಲು ಕಾರಣವಾಗಿದೆ ಎಂದು ತಿಳಿಸಿದೆ.

ಅಮೆರಿಕದ ಸುಂಕ ಜಾರಿಯು ರಫ್ತು ಮಾಡುವುದನ್ನು ಕಠಿಣಗೊಳಿಸುತ್ತವೆ. ಇದು ಉದ್ಯಮದ ಲಾಭದ ಪ್ರಮಾಣವನ್ನು ಕಡಿಮೆ ಮಾಡುವುದಲ್ಲದೆ, ಬೇಡಿಕೆಯನ್ನು ತಗ್ಗಿಸಲಿದೆ ಎಂದು ಹೇಳಿದೆ.

ಉದ್ಯಮವು ತನ್ನ ವರಮಾನದ ಶೇ 80ರಷ್ಟನ್ನು ರಫ್ತಿನಿಂದ ಪಡೆಯುತ್ತದೆ. ಈ ಪೈಕಿ ಅಮೆರಿಕದ ಪಾಲು ಶೇ 35ರಷ್ಟಿದೆ. ಅಮೆರಿಕವು ಏಪ್ರಿಲ್‌ನಲ್ಲಿ ಶೇ 10ರಷ್ಟು ಸುಂಕ ವಿಧಿಸಿದ ನಂತರ ಮಾರಾಟದ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ಪ್ರಾರಂಭವಾಯಿತು ಎಂದು ತಿಳಿಸಿದೆ.

ಉದ್ಯಮವು ದೇಶದಲ್ಲಿ ಮಾರಾಟವನ್ನು ಹೆಚ್ಚಿಸುವ ಜೊತೆಗೆ ಬೇರೆ ದೇಶಗಳಲ್ಲಿ ಮಾರಾಟವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಕಡಿಮೆ ಸುಂಕ ಇರುವ ದೇಶಗಳಲ್ಲಿ ಘಟಕಗಳನ್ನು ಸ್ಥಾಪಿಸಬೇಕು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.