ಅಮರಾವತಿ: ಅಮೆರಿಕದ ಪ್ರತಿ ಸುಂಕ ನೀತಿಯು ದೇಶದ ಸಮುದ್ರ ಆಹಾರ ಉತ್ಪನ್ನಗಳ ರಫ್ತಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಭಾರತದ ಸಮುದ್ರ ಆಹಾರ ಉತ್ಪನ್ನ ರಫ್ತುದಾರರ ಸಂಘ ತಿಳಿಸಿದೆ.
ಭಾರತದಿಂದ ಅಮೆರಿಕಕ್ಕೆ ಸಮುದ್ರ ಆಹಾರ ಉತ್ಪನ್ನಗಳು ರವಾನೆಯಾಗುತ್ತವೆ. 2023–24ನೇ ಆರ್ಥಿಕ ವರ್ಷದಲ್ಲಿ ₹21,500 ಸಾವಿರ ಕೋಟಿ ಮೌಲ್ಯದ ಉತ್ಪನ್ನಗಳು ರಫ್ತಾಗಿವೆ. ಈ ಪೈಕಿ ಸೀಗಡಿಗಳ ಪಾಲು ಶೇ 92ರಷ್ಟಿದೆ ಎಂದು ಸಂಘದ ಅಧ್ಯಕ್ಷ ಜಿ. ಪವನ್ ಕುಮಾರ್ ತಿಳಿಸಿದ್ದಾರೆ.
ದಕ್ಷಿಣ ಅಮೆರಿಕದ ದೇಶವಾದ ಈಕ್ವೆಡಾರ್‌ನಿಂದಲೂ ಅಮೆರಿಕಕ್ಕೆ ಉತ್ಪನ್ನಗಳು ಪೂರೈಕೆಯಾಗುತ್ತವೆ. ಭಾರತದ ಪ್ರತಿಸ್ಪರ್ಧಿಯಾದ ಈ ದೇಶದ ಮೇಲೆ ಶೇ 10ರಷ್ಟು ಸುಂಕ ವಿಧಿಸಲಾಗಿದೆ. ಇದರಿಂದ ನಮ್ಮ ರಫ್ತಿಗೆ ತೊಂದರೆಯಾಗಲಿದೆ ಎಂದು ಹೇಳಿದ್ದಾರೆ.
ಅಲ್ಲದೆ, ವಿಯೆಟ್ನಾಂಗೆ ಶೇ 46 ಮತ್ತು ಇಂಡೊನೇಷ್ಯಾ ಮೇಲೆ ಶೇ 32ರಷ್ಟು ಪ್ರತಿ ಸುಂಕ ವಿಧಿಸಲಾಗಿದೆ. ಹಾಗಾಗಿ, ಅಮೆರಿಕದ ಮಾರುಕಟ್ಟೆಗೆ ಅತಿಹೆಚ್ಚು ಪ್ರಮಾಣದಲ್ಲಿ ಸೀಗಡಿ ಪೂರೈಸಲು ಈಕ್ವೆಡಾರ್‌ಗೆ ನೆರವಾಗಲಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.