ADVERTISEMENT

ದೇಶದಲ್ಲಿ ವಾಹನಗಳ ಚಿಲ್ಲರೆ ಮಾರಾಟ ಶೇ 5ರಷ್ಟು ಏರಿಕೆ

ಪಿಟಿಐ
Published 7 ಜುಲೈ 2025, 14:40 IST
Last Updated 7 ಜುಲೈ 2025, 14:40 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದಲ್ಲಿ ವಾಹನಗಳ ಚಿಲ್ಲರೆ ಮಾರಾಟವು ಜೂನ್‌ ತಿಂಗಳಲ್ಲಿ ಶೇ 5ರಷ್ಟು ಏರಿಕೆಯಾಗಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಸೋಮವಾರ ತಿಳಿಸಿದೆ.

ಕಳೆದ ವರ್ಷದ ಜೂನ್‌ನಲ್ಲಿ ಒಟ್ಟು 19,11,354 ವಾಹನಗಳು ಮಾರಾಟವಾಗಿದ್ದವು. ಈ ಬಾರಿ 20,03,873 ಮಾರಾಟವಾಗಿವೆ ಎಂದು ತಿಳಿಸಿದೆ.

ಪ್ರಯಾಣಿಕ ವಾಹನಗಳ ಚಿಲ್ಲರೆ ಮಾರಾಟವು ಶೇ 2ರಷ್ಟು ಹೆಚ್ಚಳವಾಗಿದ್ದು, 2,97,722 ವಾಹನಗಳು ಮಾರಾಟವಾಗಿವೆ. ದ್ವಿಚಕ್ರ ವಾಹನಗಳ ಮಾರಾಟವು 14,46,387 ಆಗಿದೆ. ವಾಣಿಜ್ಯ ವಾಹನ ಮತ್ತು ತ್ರಿಚಕ್ರ ವಾಹನಗಳ ಮಾರಾಟ ಶೇ 7ರಷ್ಟು ಏರಿಕೆಯಾಗಿದ್ದು, ಕ್ರಮವಾಗಿ 73,367 ಮತ್ತು 1,00,625 ಆಗಿದೆ. ಟ್ರ್ಯಾಕ್ಟರ್‌ ಮಾರಾಟವು 77,214 (ಶೇ 9ರಷ್ಟು ಹೆಚ್ಚಳ) ಆಗಿದೆ. 

ADVERTISEMENT

ಏಪ್ರಿಲ್‌–ಜೂನ್‌ ಅವಧಿಯಲ್ಲಿ ಒಟ್ಟಾರೆ ವಾಹನಗಳ ಚಿಲ್ಲರೆ ಮಾರಾಟ ಶೇ 5ರಷ್ಟು ಏರಿಕೆಯಾಗಿದ್ದು, 65,42,586 ಆಗಿದೆ ಎಂದು ತಿಳಿಸಿದೆ. 

ಹೆಚ್ಚುತ್ತಿರುವ ಜಾಗತಿಕ ರಾಜಕೀಯ ಬಿಕ್ಕಟ್ಟು ಮತ್ತು ಅಮೆರಿಕ ಸುಂಕ ನೀತಿಯು ಎಚ್ಚರಿಕೆ ನಡೆ ಅನುಸರಿಸುವಂತೆ ಮಾಡಿದೆ. ಇದು ಗ್ರಾಹಕರ ಖರೀದಿಸುವ ಭಾವನೆ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ, ವಿರಳ ಲೋಹಗಳ ಮೇಲಿನ ನಿರ್ಬಂಧದಿಂದ ಘಟಕಗಳು ವಾಹನಗಳ ಬಿಡಿಭಾಗ ತಯಾರಿಕೆಯನ್ನು ಸ್ಥಗಿತಗೊಳಿಸಿವೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.