ADVERTISEMENT

ಅಶೋಕ್ ವಾಸ್ವಾನಿ ಕೊಟಕ್ ಮಹೀಂದ್ರಾ ಬ್ಯಾಂಕ್‌ ನೂತನ ಸಿಇಒ, ಎಂಡಿ

ಮೂರು ವರ್ಷದ ಅಧಿಕಾರಾವಧಿ ಇದಾಗಿದ್ದು ಅವರ ನೇಮಕವನ್ನು ಆರ್‌ಬಿಐ ಅನುಮೋದಿಸಿದೆ ಎಂದು ಬ್ಯಾಂಕ್ ತಿಳಿಸಿದೆ.

ಪಿಟಿಐ
Published 1 ಜನವರಿ 2024, 11:20 IST
Last Updated 1 ಜನವರಿ 2024, 11:20 IST
<div class="paragraphs"><p>ಅಶೋಕ್ ವಾಸ್ವಾನಿ</p></div>

ಅಶೋಕ್ ವಾಸ್ವಾನಿ

   

Barclays Bank X ಖಾತೆ

ನವದೆಹಲಿ: ಬ್ಯಾಂಕಿಂಗ್ ತಜ್ಞ ಅಶೋಕ್ ವಾಸ್ವಾನಿ ಅವರನ್ನು ಕೊಟಕ್ ಮಹೀಂದ್ರಾ ಬ್ಯಾಂಕ್‌ನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ (ಎಂಡಿ) ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ನೇಮಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ADVERTISEMENT

2023ರ ಸೆಪ್ಟೆಂಬರ್‌ನಲ್ಲಿ ಉದಯ್ ಕೊಟಕ್ ಅವರು ಎಂಡಿ ಹಾಗೂ ಸಿಇಒ ಸ್ಥಾನದಿಂದ ನಿರ್ಗಮಿಸಿದ ನಂತರ ದೀಪಕ್ ಗುಪ್ತಾ ಆ ಸ್ಥಾನಗಳಿಗೆ ಹಂಗಾಮಿಯಾಗಿ ನಿಯುಕ್ತಿಗೊಂಡಿದ್ದರು.

ಅಶೋಕ್ ವಾಸ್ವಾನಿ ಅವರ ಆಡಳಿತ ಅವಧಿ ಜನವರಿ 1ರಿಂದ ಪ್ರಾರಂಭವಾಗಿದೆ. ಮೂರು ವರ್ಷದ ಅಧಿಕಾರಾವಧಿ ಇದಾಗಿದ್ದು ಅವರ ನೇಮಕವನ್ನು ಆರ್‌ಬಿಐ ಅನುಮೋದಿಸಿದೆ ಎಂದು ಬ್ಯಾಂಕ್ ತಿಳಿಸಿದೆ.

ಕಂಪನಿ ಸೆಕ್ರೆಟರೀಸ್ ವಿಷಯದಲ್ಲಿ ಚಾರ್ಟಡ್‌ ಅಕೌಂಟೆಂಟ್ ಆಗಿದ್ದ ವಾಸ್ವಾನಿ ಅವರು, ಮುಂಬೈನ Sydenham College of Commerce and Economics ನ ಹಳೆಯ ವಿದ್ಯಾರ್ಥಿ. ಅವರು ಸಿಟಿ ಗ್ರೂಪ್ ಕಂಪನಿ ಸೇರಿದಂತೆ ಅನೇಕ ಸಂಸ್ಥೆಗಳಲ್ಲಿ ಸುಮಾರು ಮೂರು ದಶಕದ ಬ್ಯಾಂಕಿಂಗ್ ಅನುಭವ ಹೊಂದಿದ್ದಾರೆ.

ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಹಂಗಾಮಿ ಅಧ್ಯಕ್ಷರಾಗಿರುವ ಸಿ.ಎಸ್. ರಾಜನ್ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರೆಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.