ADVERTISEMENT

ಜನವರಿಯಿಂದ ಫೋಕ್ಸ್‌ವ್ಯಾಗನ್ ಕಾರಿನ ಬೆಲೆ ಹೆಚ್ಚಳ

ಪಿಟಿಐ
Published 12 ಡಿಸೆಂಬರ್ 2023, 15:46 IST
Last Updated 12 ಡಿಸೆಂಬರ್ 2023, 15:46 IST
<div class="paragraphs"><p> ಫೋಕ್ಸ್‌ವ್ಯಾಗನ್ (ಸಾಂದರ್ಭಿಕ ಚಿತ್ರ )</p></div>

ಫೋಕ್ಸ್‌ವ್ಯಾಗನ್ (ಸಾಂದರ್ಭಿಕ ಚಿತ್ರ )

   

ನವದೆಹಲಿ: ಫೋಕ್ಸ್‌ವ್ಯಾಗನ್ ಕಾರ್‌ ಇಂಡಿಯಾದ ಪ್ರಯಾಣಿಕ ವಾಹನಗಳ ಬೆಲೆಯು ಜನವರಿ 1ರಿಂದ ಶೇ 2ರ ವರೆಗೆ ಹೆಚ್ಚಳವಾಗಲಿದೆ.

ತಯಾರಿಕ ವೆಚ್ಚದ ಹೆಚ್ಚಳ ಮತ್ತು ಸರಕುಗಳ ಬೆಲೆ ಏರಿಕೆಯಿಂದ ಈ ಹೆಚ್ಚಳವನ್ನು ಮಾಡಲಾಗುತ್ತಿದೆ. ಈ ಬೆಲೆಯೇರಿಕೆ ಎಲ್ಲ ಮಾದರಿಗಳ ಕಾರಿಗೆ ಅನ್ವಯವಾಗಲಿದೆ ಎಂದು ಫೋಕ್ಸ್‌ವ್ಯಾಗನ್ ಮಂಗಳವಾರ ತಿಳಿಸಿದೆ.

ADVERTISEMENT

ಮಾರುತಿ ಸುಜುಕಿ, ಹುಂಡೈ ಮೋಟರ್‌ ಇಂಡಿಯಾ, ಟಾಟಾ ಮೋಟರ್ಸ್, ಮಹೀಂದ್ರ ಆ್ಯಂಡ್‌ ಮಹೀಂದ್ರ, ಹೋಂಡಾ, ಔಡಿ ಮತ್ತು ಬಿಎಂಡಬ್ಲ್ಯು ತಮ್ಮ ವಾಹನಗಳನ್ನು ಬೆಲೆಯನ್ನು ಜನವರಿಯಿಂದ ಏರಿಕೆ ಮಾಡುವುದಾಗಿ ಈಗಾಗಲೇ ಘೋಷಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.