ADVERTISEMENT

‘ವಾಕರೊ’ದಿಂದ ಹೊಸ ಪ್ರಚಾರ ಅಭಿಯಾನ, ವಿಭಿನ್ನ ಪಾತ್ರಗಳಲ್ಲಿ ಅಮೀರ್‌ ಖಾನ್‌

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 1:15 IST
Last Updated 12 ಅಕ್ಟೋಬರ್ 2021, 1:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪಾದರಕ್ಷೆಗಳ ಪ್ರಮುಖ ಬ್ರ್ಯಾಂಡ್‌ ಆಗಿರುವ ವಾಕರೂ, ಈ ಬಾರಿಯ ಹಬ್ಬದ ಋತುವಿನಲ್ಲಿ‘ವಾಕ್‌ ಮೋರ್‌, ರೆಸ್ಟ್‌ಲೆಸ್‌’ ಎನ್ನುವ ಹೊಸ ಮಾರುಕಟ್ಟೆ ಪ್ರಚಾರ ಅಭಿಯಾನ ಆರಂಭಿಸಿದೆ. ಇದರ ಭಾಗವಾಗಿ ನಟ ಅಮೀರ್‌ ಖಾನ್‌ ಅವರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಆರು ಟಿವಿ ಜಾಹೀರಾತುಗಳನ್ನು ಮಂಗಳವಾರದಿಂದ ಬಿಡುಗಡೆ ಮಾಡಲಿದೆ.

ಬ್ರ್ಯಾಂಡ್‌ ರಾಯಭಾರಿ ಅಮೀರ್‌ ಖಾನ್‌ ಅವರು ಪ್ರಚಾರ ಸರಣಿಯ ಪ್ರತಿ ಆವೃತ್ತಿಯಲ್ಲಿ ಖಾಸಗಿ ಪತ್ತೇದಾರ, ವೃತ್ತಿ ಸಲಹೆಗಾರ, ಪ್ರಾಂಶುಪಾಲ, ಸಿಬಿಐ ಅಧಿಕಾರಿ, ವೈದ್ಯ ಮತ್ತು ಅಜ್ಜನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕಂಪನಿ ತಿಳಿಸಿದೆ.

ಗ್ರಾಹಕರಲ್ಲಿ ಬ್ರ್ಯಾಂಡ್‌ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಹವಾಸ್ ಕ್ರಿಯೇಟಿವ್‌ ಗ್ರೂಪ್‌ ಇಂಡಿಯಾ ಸಂಸ್ಥೆಯು ಈ ಸರಣಿಯ ಪರಿಕಲ್ಪನೆಯನ್ನು ರೂಪಿಸಿ ಕಾರ್ಯಗತಗೊಳಿಸಿದೆ ಎಂದು ಹೇಳಿದೆ.

ADVERTISEMENT

ಅಮೀರ್ ಖಾನ್ ಅವರೊಂದಿಗೆ ಈ ಹೊಸ ಪ್ರಚಾರ ಅಭಿಯಾನವನ್ನು ಆರಂಭಿಸಲು ನಾವು ಉತ್ಸುಕರಾಗಿದ್ದೇವೆ ಎಂದು ವಾಕರೂ ಇಂಟರ್‌ನ್ಯಾಷನಲ್‌ ಪ್ರವೇಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಿಕೆಸಿ ನೌಶದ್‌ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.