
ಪಿಟಿಐ
ನವದೆಹಲಿ: ಜನವರಿಯಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇ 1.81ರಷ್ಟು ಆಗಿದೆ. ಇದರಿಂದಾಗಿ ಸಗಟು ಹಣದುಬ್ಬರ ಪ್ರಮಾಣವು ಸತತ ಮೂರು ತಿಂಗಳಿನಿಂದ ಏರುಗತಿಯಲ್ಲಿ ಇದ್ದಂತಾಗಿದೆ.
ಆಹಾರ ಹಾಗೂ ಆಹಾರೇತರ ಉತ್ಪನ್ನಗಳು, ತಯಾರಿಸಿದ ಉತ್ಪನ್ನಗಳ ಬೆಲೆ ಏರಿಕೆಯು ಈ ಹೆಚ್ಚಳಕ್ಕೆ ಕಾರಣವಾಗಿದೆ.
ಹಿಂದಿನ ವರ್ಷದ ಜನವರಿಯಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇ 2.51ರಷ್ಟು ಇತ್ತು. ಡಿಸೆಂಬರ್‌ನಲ್ಲಿ ಇದು ಶೇ 0.83ರಷ್ಟು ಆಗಿತ್ತು.
ಜನವರಿಯಲ್ಲಿ ತರಕಾರಿಗಳ ಸಗಟು ಬೆಲೆಯು ಶೇ 6.78ರಷ್ಟು ಹೆಚ್ಚಾಗಿದೆ. ಡಿಸೆಂಬರ್‌ನಲ್ಲಿ ಇದರ ಬೆಲೆಯು ಶೇ 3.50ರಷ್ಟು ಕಡಿಮೆ ಆಗಿತ್ತು.
ಆರ್‌ಬಿಐ ತನ್ನ ರೆಪೊ ದರದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಾಗ ಚಿಲ್ಲರೆ ಹಣದುಬ್ಬರ ದರವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.