ADVERTISEMENT

ವಿಪ್ರೊ ಜಿಇ ಹೆಲ್ತ್ ಕೇರ್‌: ವೈದ್ಯಕೀಯ ಉಪಕರಣ ತಯಾರಿಕಾ ಘಟಕ ಆರಂಭ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 14:40 IST
Last Updated 31 ಮಾರ್ಚ್ 2022, 14:40 IST
ವಿಪ್ರೊ
ವಿಪ್ರೊ    

ಬೆಂಗಳೂರು: ವೈದ್ಯಕೀಯ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಕಂಪನಿ ವಿಪ್ರೊ ಜಿಇ ಹೆಲ್ತ್ ಕೇರ್ ಬೆಂಗಳೂರಿನಲ್ಲಿ ಹೊಸ ಉತ್ಪಾದನಾ ಘಟಕವನ್ನು ಗುರುವಾರ ಆರಂಭಿಸಿದೆ. ಇದನ್ನು ಕೇಂದ್ರ ಸರ್ಕಾರದ ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಯ ಅಡಿಯಲ್ಲಿ ಆರಂಭಿಸಲಾಗಿದೆ ಎಂದು ಕಂಪನಿ ಹೇಳಿದೆ.

ವಿಪ್ರೊ ಜಿಇ ಕಂಪನಿಯ ವೈದ್ಯಕೀಯ ಉಪಕರಣ ತಯಾರಿಕಾ ಘಟಕವು ‘ಆತ್ಮನಿರ್ಭರ ಭಾರತ’ ಕಾರ್ಯಸೂಚಿಗೆ ಹೊಂದಿಕೊಂಡಿದ್ದು, ವೈದ್ಯಕೀಯ ಉಪಕರಣಗಳ ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಲಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ಕಂಪನಿಯು ಈ ಘಟಕಕ್ಕೆ ₹ 100 ಕೋಟಿಗಿಂತ ಹೆಚ್ಚು ಹೂಡಿಕೆ ಮಾಡಿದೆ.

35 ಸಾವಿರ ಚದರ ಅಡಿ ವಿಸ್ತೀರ್ಣದ ಘಟಕದಲ್ಲಿ ಸಿ.ಟಿ. ಯಂತ್ರಗಳು, ಕ್ಯಾಥ್ಲ್ಯಾಬ್ ಉಪಕರಣಗಳು, ಅಲ್ಟ್ರಾಸೌಂಡ್ ಸ್ಕ್ಯಾನರ್ಸ್, ರೋಗಿಯ ಮೇಲ್ವಿಚಾರಣೆಗೆ ಅಗತ್ಯವಿರುವ ಸಾಧನಗಳು, ಇಸಿಜಿ ಯಂತ್ರ ಮತ್ತು ವೆಂಟಿಲೇಟರ್‌ಗಳನ್ನು ತಯಾರಿಸಲಾಗುತ್ತದೆ.

ADVERTISEMENT

‘ಕೇಂದ್ರ ಸರ್ಕಾರದ ಪಿಎಲ್ಐ ಯೋಜನೆಯ ಬೆಂಬಲದೊಂದಿಗೆ, ವಿಪ್ರೊ ಜಿಇ ಹೆಲ್ತ್ ಕೇರ್‌ನ ಹೊಸ ಘಟಕವು ಆರೋಗ್ಯ ಸೇವೆ ಒದಗಿಸುವವರಿಗೆ ಸಹಾಯ ಮಾಡುತ್ತದೆ’ ಎಂದು ವಿಪ್ರೊ ಜಿಇ ಹೆಲ್ತ್ ಕೇರ್ ಅಧ್ಯಕ್ಷ ಮತ್ತು ವಿಪ್ರೊ ಎಂಟರ್‌ಪ್ರೈಸಸ್ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.