ನವದೆಹಲಿ: ಮನೆಯಿಂದಲೇ ಕಚೇರಿ ಕೆಲಸ ನಿರ್ವಹಿಸುವುದು ಸದ್ಯದ ಮತ್ತು ಭವಿಷ್ಯದ ಆಯ್ಕೆಯೂ ಆಗುವ ಸಾಧ್ಯತೆಗಳೇ ಹೆಚ್ಚಿವೆ. ಹೀಗಾಗಿ ಮನೆ, ಪ್ಲ್ಯಾಟ್‌ಗಳ ಬಗೆಗೆ ಜನರ ಆದ್ಯತೆಗಳೂ ಬದಲಾಗುತ್ತಿವೆ ಎಂದು ಎಚ್‌ಡಿಎಫ್‌ಸಿ ಹೇಳಿದೆ.
‘ಅತಿ ಹೆಚ್ಚಿನ ಸ್ಥಳಾವಕಾಶ ಇರುವ ಅಪಾರ್ಟ್‌ಮೆಂಟ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ’ ಎಂದು ಎಚ್‌ಡಿಎಫ್‌ಸಿ ವ್ಯವಸ್ಥಾಪಕ ನಿರ್ದೇಶಕಿ ರೇಣು ಸೂದ್ ಕಾರ್ನಾಡ್ ಹೇಳಿದ್ದಾರೆ.
ಈ ಬೇಡಿಕೆಯ ಲಾಭ ಪಡೆದುಕೊಳ್ಳಲು ಮುಂದಾಗಿರುವ ಹೌಸಿಂಗ್ ಫೈನಾನ್ಸ್ ಕಂಪನಿ, ಬುಧವಾರದಿಂದ ಒಂದು ತಿಂಗಳವರೆಗೆ ಆನ್‌ಲೈನ್ ಪ್ರಾಪರ್ಟಿ ಷೋ ಹಮ್ಮಿಕೊಂಡಿದೆ. ದೆಹಲಿ ರಾಜಧಾನಿ ಪ್ರದೇಶದಲ್ಲಿ 75ಕ್ಕೂ ಅಧಿಕ ಡೆವಲಪರ್‌ಗಳು 150ಕ್ಕೂ ಹೆಚ್ಚಿನ ಯೋಜನೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಮುಂದಿನ ವಾರ ಮುಂಬೈ ಪ್ರದೇಶದಲ್ಲಿಯೂ ಪ್ರಾಪರ್ಟಿ ಷೋ ನಡೆಸಲು ನಿರ್ಧರಿಸಲಾಗಿದೆ.
ಎಲ್ಲವೂ ಆನ್‌ಲೈನ್ ಮೂಲಕ ನಡೆಯಲಿದ್ದು, ಗ್ರಾಹಕರಿಗೆ ತಕ್ಷಣವೇ ಮಾಹಿತಿ ಸಿಗಲಿದೆ. ಒಂದೇ ಕಡೆ ಮನೆ ಖರೀದಿಯ ಎಲ್ಲಾ ಹಂತಗಳನ್ನೂ ಪೂರೈಸಲಾಗುವುದು ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.