ADVERTISEMENT

ಮೂನ್‌ಲೈಟಿಂಗ್‌ಗೆ ಅವಕಾಶವಿಲ್ಲ: ಕೇಂದ್ರ

ಪಿಟಿಐ
Published 19 ಡಿಸೆಂಬರ್ 2022, 13:55 IST
Last Updated 19 ಡಿಸೆಂಬರ್ 2022, 13:55 IST
   

ನವದೆಹಲಿ: ನೌಕರರು ತಮಗೆ ನೌಕರಿ ನೀಡಿದವರ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ಯಾವುದೇ ಕೆಲಸ ಮಾಡಲು ಅವಕಾಶ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಅದರೆ, ಮೂನ್‌ಲೈಟಿಂಗ್‌ನಲ್ಲಿ ಯಾರು ತೊಡಗಿದ್ದಾರೆ ಎಂಬ ಬಗ್ಗೆ ತಾನು ಪರಿಶೀಲನೆ ನಡೆಸುತ್ತಿಲ್ಲ ಎಂದೂ ಅದು ಸ್ಪಷ್ಟಪಡಿಸಿದೆ.

ಯಾವುದೇ ಕಂಪನಿಯ ಪೂರ್ಣಾವಧಿ ನೌಕರನು ತನಗೆ ನೌಕರಿ ನೀಡಿದ ಕಂಪನಿಗೆ ತಿಳಿಸದೆಯೇ ಹೆಚ್ಚುವರಿ ಉದ್ಯೋಗ ಕೈಗೊಂಡರೆ ಅದನ್ನು ಮೂನ್‌ಲೈಟಿಂಗ್ ಎನ್ನಲಾಗುತ್ತದೆ.

‘ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶಗಳು) ಕಾಯ್ದೆ 1946ರ ಅನ್ವಯ, ನೌಕರನು ತಾನು ಕೆಲಸ ಮಾಡುವ ಕಂಪನಿಯ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವಂತಿಲ್ಲ ಮತ್ತು ಕಂಪನಿಯಲ್ಲಿ ತಾನು ಹೊಂದಿರುವ ಉದ್ಯೋಗಕ್ಕೆ ಹೆಚ್ಚುವರಿಯಾಗಿ, ಆ ಕಂಪನಿಯ ಹಿತಾಸಕ್ತಿಗಳ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲ ಇನ್ನೊಂದು ಉದ್ಯೋಗ ಮಾಡುವಂತಿಲ್ಲ’ ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ರಾಮೇಶ್ವರ ತೆಲಿ ಲೋಕಸಭೆಯಲ್ಲಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.