ADVERTISEMENT

ಭಾರತದಲ್ಲಿ ಹಣಕಾಸು ಸೇವೆ ನಿಲ್ಲಿಸಿದ ಶಿಯೋಮಿ

ರಾಯಿಟರ್ಸ್
Published 28 ಅಕ್ಟೋಬರ್ 2022, 21:15 IST
Last Updated 28 ಅಕ್ಟೋಬರ್ 2022, 21:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಶಿಯೋಮಿ ಕಾರ್ಪೊರೇಷನ್‌ ಭಾರತದಲ್ಲಿ ತನ್ನ ಹಣಕಾಸು ಸೇವೆಗಳ ವಹಿವಾಟನ್ನು ನಿಲ್ಲಿಸಿದೆ ಎಂದು ಶಿಯೋಮಿ ಇಂಡಿಯಾದ ವಕ್ತಾರ ಶುಕ್ರವಾರ ತಿಳಿಸಿದ್ದಾರೆ.

ಮೂಲ ವಹಿವಾಟಿಗೆ ಗಮನ ಹರಿಸಲು ಮತ್ತು ಕಾರ್ಯಯೋಜನೆಯ ಭಾಗವಾಗಿ 2022ರ ಮಾರ್ಚ್‌ನಲ್ಲಿಯೇ ಹಣಕಾಸು ಸೇವೆಗಳನ್ನು ನಿಲ್ಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬಿಲ್‌ ಪಾವತಿ ಮತ್ತು ಹಣ ವರ್ಗಾವಣೆಗೆ ಬಳಕೆಯಲ್ಲಿದ್ದ ಮಿ ಪೇ ಆ್ಯಪ್‌ ರಾಷ್ಟ್ರೀಯ ಪಾವತಿ ನಿಗಮದಲ್ಲಿ (ಎನ್‌ಪಿಸಿಐ) ಇರುವ ಯುಪಿಐ ಆ್ಯಪ್‌ಗಳ ಪಟ್ಟಿಯಲ್ಲಿ ಇಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.