ADVERTISEMENT

ಯೆಸ್‌ ಬ್ಯಾಂಕ್‌ ಲಾಭ ಶೇ 18ರಷ್ಟು ಹೆಚ್ಚಳ

ಪಿಟಿಐ
Published 18 ಅಕ್ಟೋಬರ್ 2025, 13:09 IST
Last Updated 18 ಅಕ್ಟೋಬರ್ 2025, 13:09 IST
ಯೆಸ್‌ ಬ್ಯಾಂಕ್‌
ಯೆಸ್‌ ಬ್ಯಾಂಕ್‌   

ಮುಂಬೈ: ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಯೆಸ್‌ ಬ್ಯಾಂಕ್‌ನ ನಿವ್ವಳ ಲಾಭವು ಶೇ 18.3ರಷ್ಟು ಏರಿಕೆಯಾಗಿದ್ದು, ₹654 ಕೋಟಿ ಆಗಿದೆ.

ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ಬ್ಯಾಂಕ್‌ ₹553 ಕೋಟಿ ಲಾಭ ಗಳಿಸಿತ್ತು. ನಿವ್ವಳ ಬಡ್ಡಿ ವರಮಾನ ಶೇ 4.6ರಷ್ಟು ಹೆಚ್ಚಳವಾಗಿದೆ. 

ಬ್ಯಾಂಕ್‌ನ ಇತರೆ ವರಮಾನ ಶೇ 16.9ರಷ್ಟು ಏರಿಕೆಯಾಗಿದ್ದು, ₹1,664 ಕೋಟಿಯಾಗಿದೆ. ಠೇವಣಿ ಪ್ರಮಾಣ ಶೇ 6.9ರಷ್ಟು ಏರಿಕೆಯಾಗಿದೆ. ಕಾರ್ಯಾಚರಣೆ ವೆಚ್ಚವು ಶೇ 0.6ರಷ್ಟು ಹೆಚ್ಚಳವಾಗಿ, ₹2,649 ಕೋಟಿಯಾಗಿದೆ. 

ADVERTISEMENT

ಒಟ್ಟು ವಸೂಲಾಗದ ಸಾಲದ ಪ್ರಮಾಣ ಶೇ 1.6ರಷ್ಟಿದ್ದು, ಯಥಾಸ್ಥಿತಿಯಲ್ಲಿದೆ. ಬ್ಯಾಂಕ್‌ನ ಬಂಡವಾಳ ಮೀಸಲು ಅನುಪಾತ (ಸಿಎಆರ್‌) ಶೇ 15.6ರಷ್ಟಿದೆ ಎಂದು ಬ್ಯಾಂಕ್ ಶನಿವಾರ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.