ADVERTISEMENT

₹401 ಕೋಟಿ ಜಿಎಸ್‌ಟಿ ಬಾಕಿ: ಜೊಮಾಟೊಗೆ ಶೋಕಾಸ್‌ ನೋಟಿಸ್‌

ಪಿಟಿಐ
Published 28 ಡಿಸೆಂಬರ್ 2023, 16:37 IST
Last Updated 28 ಡಿಸೆಂಬರ್ 2023, 16:37 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಆನ್‌ಲೈನ್‌ ಆಹಾರ ವಿತರಣಾ ಸಂಸ್ಥೆಯಾದ ಜೊಮಾಟೊ ಲಿಮಿಟೆಡ್‌ಗೆ ₹401.7 ಕೋಟಿ ಜಿಎಸ್‌ಜಿ ಪಾವತಿ ಬಾಕಿ ಸಂಬಂಧ ಪುಣೆ ವಿಭಾಗದ ಜಿಎಸ್‌ಟಿ ಗುಪ್ತಚರ ಮಹಾ ನಿರ್ದೇಶನಾಲಯವು ಷೋಕಾಸ್‌ ನೋಟಿಸ್‌ ನೀಡಿದೆ.

ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017ರ ಸೆಕ್ಷನ್‌ 74(1) ಅನ್ವಯ ಈ ನೋಟಿಸ್‌ ಜಾರಿಗೊಳಿಸಲಾಗಿದೆ. 

ADVERTISEMENT

2019ರ ಅಕ್ಟೋಬರ್‌ 29ರಿಂದ 2022ರ ಮಾರ್ಚ್‌ 31ರವರೆಗೆ ತೆರಿಗೆ ಸೇರಿದಂತೆ ಬಡ್ಡಿ ಹಾಗೂ ದಂಡವನ್ನು ಈ ಮೊತ್ತ ಒಳಗೊಂಡಿದೆ. ನಿಗದಿತ ಅವಧಿಯಲ್ಲಿ ವಿತರಣಾ ಪಾಲುದಾರರ ಪರವಾಗಿ ಜೊಮಾಟೊ ಕಂಪನಿಯೇ ಗ್ರಾಹಕರಿಂದ ಈ ಶುಲ್ಕ ಸಂಗ್ರಹಿಸಿದೆ ಎಂದು ನೋಟಿಸ್‌ನಲ್ಲಿ ಪ್ರಸ್ತಾಪಿಸಲಾಗಿದೆ. 

‘ಇದು ಕಂಪನಿ ಪಾವತಿಸಬೇಕಿರುವ ಬಾಕಿ ಮೊತ್ತವಲ್ಲ. ವಿತರಣಾ ಶುಲ್ಕಕ್ಕೆ ಸಂಬಂಧಿಸಿ ಪಾಲುದಾರರು ಸಂಗ್ರಹಿಸಿರುವ ಮೊತ್ತವಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. 

‘ಒಪ್ಪಂದದ ನಿಯಮಾವಳಿಗಳು ಮತ್ತು ಷರತ್ತಿನ ಅನ್ವಯ ಗ್ರಾಹಕರಿಗೆ ವಿತರಣಾ ಸೇವೆಯನ್ನು ಪಾಲುದಾರರೇ ಒದಗಿಸಿದ್ದಾರೆ. ಕಂಪನಿ ಒದಗಿಸಿಲ್ಲ. ಕಾನೂನು ಮತ್ತು ತೆರಿಗೆ ತಜ್ಞರ ಸಲಹೆ ಪಡೆದು ನೋಟಿಸ್‌ಗೆ ಉತ್ತರಿಸಲಾಗುವುದು’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.