ADVERTISEMENT

ಜೊಮ್ಯಾಟೊ ಮಹಿಳಾ ಸಿಬ್ಬಂದಿಗಳಿಗೆ ಮುಟ್ಟಿನ ರಜೆ ಸೌಲಭ್ಯ

ಪಿಟಿಐ
Published 9 ಆಗಸ್ಟ್ 2020, 2:08 IST
Last Updated 9 ಆಗಸ್ಟ್ 2020, 2:08 IST
ಜೊಮ್ಯಾಟೊ
ಜೊಮ್ಯಾಟೊ    

ನವದೆಹಲಿ: ಆಹಾರ ಪೂರೈಕೆಯ ಆ್ಯಪ್ ಆಧಾರಿತ ಸೇವೆ ನೀಡುವ ಜೊಮ್ಯಾಟೊ ಕಂಪನಿ ಮಹಿಳಾ ಸಿಬ್ಬಂದಿಗಳಿಗೆ ವರ್ಷದಲ್ಲಿ 10 ದಿನ ಮುಟ್ಟಿನ ರಜೆ ನೀಡುವುದಾಗಿ ಹೇಳಿದೆ.

ಜೊಮ್ಯಾಟೊ ಕಂಪನಿಯಲ್ಲಿ ನಾವು ನಂಬಿಕೆ, ಸತ್ಯ ಮತ್ತು ಸ್ವೀಕಾರದ ಸಂಸ್ಕೃತಿಯನ್ನು ಬೆಳೆಸಲು ಬಯಸುತ್ತೇವೆ. ಇಂದಿನಿಂದ ಲೈಂಗಿಕ ಅಲ್ಪ ಸಂಖ್ಯಾತರು ಸೇರಿದಂತೆ ಎಲ್ಲ ಮಹಿಳೆಯರಿಗೂ ವರ್ಷದಲ್ಲಿ 10 ದಿನ ಮುಟ್ಟಿನ ರಜೆ ಸೌಲಭ್ಯ ಪಡೆಯಬಹುದು ಎಂದು ಜೊಮ್ಯಾಟೊ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಶನಿವಾರ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.

ಮುಟ್ಟಿನ ರಜೆ ಪಡೆಯಲು ಯಾರೊಬ್ಬರೂ ನಾಚಿಕೆ ಪಡಬೇಕಿಲ್ಲ.ನಿಮ್ಮ ತಂಡದವರಿಗೆ ಅಥವಾ ಇಮೇಲ್ ಮೂಲಕವೂ ಮುಟ್ಟಿನ ರಜೆ ಪಡೆದಿರುವ ಬಗ್ಗೆ ಹೇಳಬಹುದು.

ADVERTISEMENT

ಅದೇ ವೇಳೆ ಮಹಿಳಾ ಸಿಬ್ಬಂದಿಗಳು ಮುಟ್ಟಿನ ರಜೆ ಪಡೆಯುವುದರ ಬಗ್ಗೆ ಇತರ ಸಿಬ್ಬಂದಿಗಳು ಇರಿಸುಮುರಿಸು ಮಾಡಬಾರದು. ಮುಟ್ಟಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರಿಗೆ ತುಂಬಾ ನೋವು ಇರುತ್ತದೆ. ಜೊಮ್ಯಾಟೊದಲ್ಲಿ ನಾವು ನಿಜವಾದ ಸಹಕಾರ ಸಂಸ್ಕೃತಿಯನ್ನು ಬಯಸುವುದಾದರೆ ಈ ಹೊತ್ತಲ್ಲಿ ಅವರ ಪರವಾಗಿ ನಾವು ನಿಲ್ಲಬೇಕಿದೆ ಎಂದು ಗೋಯಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.