ADVERTISEMENT

ಜೊಮ್ಯಾಟೊ ಡ್ರೈವರ್‌ಗಳ ಅಶಿಸ್ತಿನ ವರ್ತನೆಗೆ ದೂರು ನೀಡಲು ಹಾಟ್‌ಲೈನ್ ನಂಬರ್

ಆನ್‌ಲೈನ್ ಮೂಲಕ ಆಹಾರ ವಿತರಿಸುವ ಜೊಮ್ಯಾಟೊ

ಪಿಟಿಐ
Published 3 ನವೆಂಬರ್ 2022, 6:34 IST
Last Updated 3 ನವೆಂಬರ್ 2022, 6:34 IST
   

ನವದೆಹಲಿ: ಆನ್‌ಲೈನ್ ಮೂಲಕ ಮನೆಬಾಗಿಲಿಗೆ ಆಹಾರ ಒದಗಿಸುವ ಸೇವೆ ನೀಡುತ್ತಿರುವ ಜೊಮ್ಯಾಟೊ, ಡ್ರೈವರ್‌ಗಳ ಅಶಿಸ್ತಿನ ವರ್ತನೆ ವಿರುದ್ಧ ದೂರು ನೀಡಲು ಹಾಟ್‌ಲೈನ್ ನಂಬರ್ ಆರಂಭಿಸಿದೆ.

ಜೊಮ್ಯಾಟೊ ಮೂಲಕ ಬುಕ್ ಮಾಡಲಾಗುವ ಆಹಾರವನ್ನು ಡೆಲಿವರಿ ನೀಡಲು ಹೋಗುವ ವಿತರಕರು ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುತ್ತಿಲ್ಲ ಮತ್ತು ವೇಗವಾಗಿ ಸಾಗುತ್ತಾರೆ ಎನ್ನುವ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಕಳೆದ ಆಗಸ್ಟ್‌ನಲ್ಲಿ ನಡೆದ ಸಭೆಯಲ್ಲಿ ಜೊಮ್ಯೊಟೊ ಈ ನಿರ್ಣಯ ಕೈಗೊಂಡಿತ್ತು. ಅಲ್ಲದೆ, ಶೀಘ್ರದಲ್ಲೇ ಡೆಲಿವರಿ ಬ್ಯಾಗ್‌ನಲ್ಲಿ ದೂರು ನೀಡಲು ಹಾಟ್‌ಲೈನ್ ನಂಬರ್ ಪ್ರದರ್ಶಿಸುವುದಾಗಿ ಹೇಳಿತ್ತು.

ADVERTISEMENT

ಅದರಂತೆ, ಜೊಮ್ಯಾಟೊ ಡೆಲಿವರಿ ಬ್ಯಾಗ್ ಮೇಲೆ ಹಾಟ್‌ಲೈನ್ ನಂಬರ್ ಬಳಕೆಗೆ ತಂದಿದೆ. ಹೀಗಾಗಿ, ಟ್ರಾಫಿಕ್ ನಿಯಮ ಉಲ್ಲಂಘಿಸುವ ಜೊಮ್ಯಾಟೊ ಡೆಲಿವರಿ ಬಾಯ್ಸ್ ವಿರುದ್ಧ ದೂರು ನೀಡಲು ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.