ನವದೆಹಲಿ: ಪಿಂಚಣಿ ನಿಧಿ ಸಂಸ್ಥೆಯಾಗಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಪ್ರಸಕ್ತ ಹಣಕಾಸು ವರ್ಷದ (2018–19) ಬಡ್ಡಿ ದರವನ್ನು ಶೇ 0.10ರಷ್ಟು ಹೆಚ್ಚಿಸಲು ನಿರ್ಧರಿಸಿದೆ.
2017–18ನೆ ವರ್ಷಕ್ಕೆ ನೀಡಲಾಗುತ್ತಿದ್ದ ಶೇ 8.55 ಬಡ್ಡಿ ದರವು ಶೇ 8.65ರಷ್ಟಾಗಲಿದೆ. ಇದರಿಂದ ಭವಿಷ್ಯ ನಿಧಿಯ 6 ಕೋಟಿ ಸದಸ್ಯರಿಗೆ ಪ್ರಯೋಜನ ಲಭಿಸಲಿದೆ.
ಭವಿಷ್ಯ ನಿಧಿ ಸಂಘಟನೆಯ ಕೇಂದ್ರೀಯ ಮಂಡಳಿಯ ಎಲ್ಲ ಸದಸ್ಯರು ಬಡ್ಡಿ ದರ ಹೆಚ್ಚಿಸುವ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಬಡ್ಡಿ ದರ ಹೆಚ್ಚಿಸುವ ಈ ಪ್ರಸ್ತಾವವನ್ನು ಅನುಮೋದನೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳಿಸಲಾಗುವುದು ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ.
ಭವಿಷ್ಯ ನಿಧಿ ಬಡ್ಡಿ ದರ ವಿವರ | |
ವರ್ಷ | ಬಡ್ಡಿ ದರ (%) |
2017-18 | 8.55 |
2016–17 | 8.65 |
2015–16 | 8.80 |
2014–15 | 8.75 |
2013–14 | 8.75 |
2012–13 | 8.50 |
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.