ADVERTISEMENT

ಅಂಚೆ ಇಲಾಖೆಯ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ; ಬಡ್ಡಿಯೂ ಹೆಚ್ಚು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜನವರಿ 2026, 12:21 IST
Last Updated 8 ಜನವರಿ 2026, 12:21 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಹನಿ ಹನಿ ಕೂಡಿದರೆ ಹಳ್ಳ ಎನ್ನುವಂತೆ ಸಣ್ಣ ಸಣ್ಣ ಹಣವನ್ನು ಕೂಡಿ ಹಾಕಿ ಕೊನೆಯಲ್ಲಿ ಒಂದಷ್ಟು ಮೊತ್ತವನ್ನು ಪಡೆಯವುದರಲ್ಲಿ ಖುಷಿ ತುಸು ಹೆಚ್ಚು. ಇದಕ್ಕೆಂದೆ ಅಂಚೆ ಕಚೇರಿಗಳಲ್ಲಿ ಸರ್ಕಾರ ಅನೇಕ ಸಣ್ಣ ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಪ್ರತಿ ಮೂರು ತಿಂಗಳಿಗೆ ಇದರ ಬಡ್ಡಿದರವನ್ನು ಪರಿಷ್ಕರಿಸುತ್ತದೆ. 

2026ರ ಜನವರಿ1 ರಿಂದ ಮಾರ್ಚ್‌ 31ರವರೆಗಿನ ಬಡ್ಡಿದರವನ್ನು ಅಂಚೆ ಇಲಾಖೆ ಬಿಡುಗಡೆ ಮಾಡಿದೆ. ಸುಕನ್ಯಾ ಸಮೃದ್ಧಿ ಯೋಜನೆ  (ಎಸ್‌ಎಸ್‌ವೈ), ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್‌), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ
(ಎನ್‌ಎಸ್‌ಸಿ), ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌) ಸೇರಿದಂತೆ ಇನ್ನೂ ಹಲವು ಯೋಜನೆಗಳ ಬಡ್ಡಿದರವನ್ನು ಪರಿಷ್ಕರಿಸಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ. 

ADVERTISEMENT
ಯೋಜನೆಬಡ್ಡಿದರ (%)
ಸುಕನ್ಯಾ ಸಮೃದ್ಧಿ ಯೋಜನೆ (SSY)8.2
ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)8.2
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC)7.7
ಸಾರ್ವಜನಿಕ ಭವಿಷ್ಯ ನಿಧಿ (PPF)7.1
ಕಿಸಾನ್ ವಿಕಾಸ್ ಪತ್ರ7.5
ಮಾಸಿಕ ಆದಾಯ ಯೋಜನೆ7.4
ಉಳಿತಾಯ ಖಾತೆ4
ಪುನರಾವರ್ತಿತ ಠೇವಣಿ6.7

ಇವುಗಳ ಹೊರತಾಗಿ ರಾಷ್ಟ್ರೀಯ ಉಳಿತಾಯ ಸಮಯ ಠೇವಣಿಗೂ ಬಡ್ಡಿದರವನ್ನು ಪರಿಷ್ಕರಿಸಲಾಗಿದೆ.

ಅವುಗಳನ್ನು ನೋಡುವುದಾದರೆ,

1 ವರ್ಷದ ಠೇವಣಿ 6.9%

2 ವರ್ಷದ ಠೇವಣಿ 7.0%

3 ವರ್ಷದ ಠೇವಣಿ 7.1%

5 ವರ್ಷದ ಠೇವಣಿ  7.5%

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.