ಎಸ್‌ಐಪಿ
(ಐಸ್ಟೋಕ್ ಚಿತ್ರ)
2024ರ ಮಾರ್ಚ್‌ವರೆಗಿನ ದತ್ತಾಂಶದ ಅನ್ವಯ, ವಿವಿಧ ಆಸ್ತಿ ನಿರ್ವಹಣಾ ಕಂಪನಿಗಳು ನಿರ್ವಹಿಸುತ್ತಿರುವ ಎಸ್‌ಐಪಿ ಹೂಡಿಕೆ ಮೊತ್ತದಲ್ಲಿ ಮಹಿಳೆಯರಿಂದ ಎಸ್‌ಐಪಿ ಮೂಲಕ ಬಂದಿರುವ ಮೊತ್ತದ ಪಾಲು ಶೇ 30.5ಕ್ಕಿಂತ ಹೆಚ್ಚಿದೆ.
319.3% - 2019ರ ಮಾರ್ಚ್‌ನಿಂದ 2024ರ ಮಾರ್ಚ್ ನಡುವಿನ ಅವಧಿಯಲ್ಲಿ ಮಹಿಳೆಯರಿಂದ ಆಗುವ ಎಸ್‌ಐಪಿಗಳ ಮೊತ್ತವು ಶೇಕಡ 319.3ರಷ್ಟು ಹೆಚ್ಚಳ ಕಂಡಿದೆ. ಅಂದರೆ ಮಹಿಳೆಯರು ಶಿಸ್ತುಬದ್ಧವಾಗಿ ಎಸ್‌ಐಪಿ ಮೂಲಕ ಹಣ ಹೂಡಿಕೆ ಮಾಡುತ್ತಿದ್ದಾರೆ.
ತಾಳ್ಮೆ ಮಹಿಳೆಯರಲ್ಲೇ ಹೆಚ್ಚು
ಮಹಿಳೆಯರು ಹೂಡಿಕೆ ಮಾಡಿದ ಹಣವನ್ನು ತಕ್ಷಣಕ್ಕೆ ಹಿಂಪಡೆಯದೆ ಇರುವ ಪ್ರವೃತ್ತಿ ಹೆಚ್ಚುತ್ತಿದೆ. ಮಹಿಳೆಯರು ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ತೊಡಗಿಸಿರುವ ಹಣದ ಪ್ರಮಾಣವು ಶೇ 21.3ರಷ್ಟು ಇದೆ. ಪುರುಷರ ಪೈಕಿ ಐದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ತೊಡಗಿಸಿರುವ ಹಣದ ಪ್ರಮಾಣವು ಶೇ 19.9ರಷ್ಟು ಮಾತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.