
ಸಿಟಿ ಯೂನಿಯನ್ ಬ್ಯಾಂಕ್‌ನ ಷೇರು ಮೌಲ್ಯವು ₹353ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಕಂಪನಿ ಆನಂದ ರಾಠಿ ಹೇಳಿದೆ. ಬ್ಯಾಂಕ್ ತನ್ನ ಡಿಸೆಂಬರ್ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿದ್ದು, ಬ್ಯಾಂಕ್‌ನ ಆಸ್ತಿಗಳ ಸ್ಥಿತಿಯು ಆರೋಗ್ಯಕರವಾಗಿ ಇದೆ.
ಬ್ಯಾಂಕ್‌ನ ಸಾಲ ನೀಡಿಕೆ ಪ್ರಮಾಣದ ಹೆಚ್ಚಳವು ಹಿಂದಿನ ವರ್ಷದ ಡಿಸೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 20.8ಕ್ಕೆ ತಲುಪಿದೆ. ಎಂಎಸ್‌ಎಂಇ ವಲಯಕ್ಕೆ ನೀಡಿರುವ ಸಾಲ ಮತ್ತು ಚಿನ್ನದ ಸಾಲದಲ್ಲಿ ಏರಿಕೆ ಆಗಿದೆ. ಇದು ಇತರ ಬ್ಯಾಂಕ್‌ಗಳಿಗಿಂತ ಈ ಬ್ಯಾಂಕ್ ಹೆಚ್ಚಿನ ಪ್ರಮಾಣದಲ್ಲಿ ಬೆಳವಣಿಗೆ ಸಾಧಿಸಬಲ್ಲದು ಎಂಬುದನ್ನು ಹೇಳುತ್ತಿದೆ ಎಂದು ಆನಂದ ರಾಠಿ ವಿವರಿಸಿದೆ.
‘ಬ್ಯಾಂಕ್‌ನ ವರಮಾನದಲ್ಲಿ ಸ್ಥಿರತೆ ಇರಲಿದೆ ಎಂಬುದು ನಮ್ಮ ನಿರೀಕ್ಷೆ’ ಎಂದು ಕೂಡ ಅದು ಹೇಳಿದೆ. ಬುಧವಾರದ ವಹಿವಾಟಿನ ಅಂತ್ಯಕ್ಕೆ ಸಿಟಿ ಯೂನಿಯನ್ ಬ್ಯಾಂಕ್‌ನ ಷೇರು ಮೌಲ್ಯವು ₹292 ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.