ಷೇರು ಮಾರುಕಟ್ಟೆ
‘ಅದಾನಿ ಪೋರ್ಟ್ ಆ್ಯಂಡ್ ಎಸ್‌ಇಜೆಡ್’ನ ಷೇರುಮೌಲ್ಯವು ₹1,777ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಸಂಸ್ಥೆ ಪ್ರಭುದಾಸ್ ಲೀಲಾಧರ್ ಕ್ಯಾಪಿಟಲ್ ಅಂದಾಜು ಮಾಡಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಕಾರ್ಯಾಚರಣೆ ಸಾಧನೆಯು ಚೆನ್ನಾಗಿ ಆಗಿದೆ. ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ಕಂಪನಿಯ ಸರಕು ಸಾಗಣೆ ವಹಿವಾಟುಗಳು ಚೆನ್ನಾಗಿ ಆಗುವ ನಿರೀಕ್ಷೆ ಇದೆ. ಸರಕು ಸಾಗಣೆ ವಹಿವಾಟಿನಲ್ಲಿ 2028–29ನೆಯ ಹಣಕಾಸು ವರ್ಷದವರೆಗೆ ಒಟ್ಟು ಬಂಡವಾಳ ವೆಚ್ಚವಾಗಿ ಗರಿಷ್ಠ ₹20 ಸಾವಿರ ಕೋಟಿವರೆಗೆ ತೊಡಗಿಸುವ ಅಂದಾಜನ್ನು ಕಂಪನಿ ನೀಡಿದೆ ಎಂದು ಪ್ರಭುದಾಸ್ ಲೀಲಾಧರ್ ಹೇಳಿದೆ.
ದೇಶದಲ್ಲಿ 15 ಬಂದರುಗಳು ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ 4 ಬಂದರುಗಳನ್ನು ಹೊಂದಿರುವ ಕಂಪನಿಯು ದೇಶದ ಜಾಗತಿಕ ರಫ್ತಿನಲ್ಲಿ ಆಗುವ ಹೆಚ್ಚಳದ ಪ್ರಯೋಜನವನ್ನು ಪಡೆಯುವ ನಿರೀಕ್ಷೆ ಇದೆ ಎಂದೂ ಬ್ರೋಕರೇಜ್ ಸಂಸ್ಥೆ ಹೇಳಿದೆ. ಬುಧವಾರದ ವಹಿವಾಟಿನ ಅಂತ್ಯಕ್ಕೆ ಕಂಪನಿಯು ಷೇರುಮೌಲ್ಯವು ₹1,366.90 ಆಗಿತ್ತು.
(ಬ್ರೋಕರೇಜ್ ಸಂಸ್ಥೆಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆಯಲ್ಲ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.