ADVERTISEMENT

ಬಿಟ್‌ಕಾಯಿನ್‌ ಮೌಲ್ಯ ದಾಖಲೆಯ ಏರಿಕೆ; ಒಂದು ಕ್ರಿಪ್ಟೊ ಕರೆನ್ಸಿಗೆ ₹31.94 ಲಕ್ಷ!

43,000 ಡಾಲರ್‌ ದಾಟಿದ ಕರೆನ್ಸಿ ಮೌಲ್ಯ

ಏಜೆನ್ಸೀಸ್
Published 8 ಫೆಬ್ರುವರಿ 2021, 16:41 IST
Last Updated 8 ಫೆಬ್ರುವರಿ 2021, 16:41 IST
ಬಿಟ್‌ಕಾಯಿನ್‌–ಸಾಂದರ್ಭಿಕ ಚಿತ್ರ
ಬಿಟ್‌ಕಾಯಿನ್‌–ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್‌: ಕ್ರಿಪ್ಟೊ ಕರೆನ್ಸಿ 'ಬಿಟ್‌ಕಾಯಿನ್‌'ನಲ್ಲಿ ಎಲೆಕ್ಟ್ರಿಕ್‌ ಕಾರು ತಯಾರಿಕಾ ಕಂಪನಿ ಟೆಸ್ಲಾ 1.5 ಬಿಲಿಯನ್‌ ಡಾಲರ್‌ (ಸುಮಾರು 10,940 ಕೋಟಿ ರೂಪಾಯಿ) ಹೂಡಿಕೆ ಮಾಡಿದೆ. ಇದರ ಪರಿಣಾಮ ಬಿಟ್‌ಕಾಯಿನ್‌ ಮೌಲ್ಯ ಸಾರ್ವಕಾಲಿಕ ದಾಖಲೆ ಮುಟ್ಟಿದೆ.

ಸೋಮವಾರ ಪ್ರತಿ ಬಿಟ್‌ಕಾಯಿನ್‌ ಮೌಲ್ಯ 43,000 ಅಮೆರಿಕನ್‌ ಡಾಲರ್‌ಗಿಂತಲೂ ಅಧಿಕ ಮಟ್ಟ ತಲುಪಿದೆ. ಈ ವರ್ಷದ ಆರಂಭದಿಂದ ಈ ಡಿಜಿಟಲ್‌ ಕರೆನ್ಸಿಯ ಮೌಲ್ಯ ಶೇ 50ರಷ್ಟು ಏರಿಕೆಯಾಗಿದ್ದು, ಜಗತ್ತಿನ ಗಮನ ಸೆಳೆದಿದೆ.

ಭಾರತದ ರೂಪಾಯಿಯಲ್ಲಿ ಒಂದು ಬಿಟ್‌ಕಾಯಿನ್‌ಗೆ ₹31.94 ಲಕ್ಷ.

ADVERTISEMENT

ಜನವರಿ 29ರಂದು ಟೆಸ್ಲಾ ಸಿಇಒ ಇಲಾನ್‌ ಮಸ್ಕ್‌ ತಮ್ಮ ಟ್ವಿಟರ್‌ ಖಾತೆಯ ವಿವರಣೆಯಲ್ಲಿ ಬಿಟ್‌ಕಾಯಿನ್‌ (#bitcoin) ಎಂದು ಹ್ಯಾಷ್‌ಟ್ಯಾಗ್‌ ಸಹಿತ ಪ್ರಕಟಿಸಿಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಟೆಸ್ಲಾ ಕ್ರಿಪ್ಟೊ ಕರೆನ್ಸಿಯಲ್ಲಿ ದೊಡ್ಡ ಮೊತ್ತದ ಹೂಡಿಕೆ ಮಾಡಿದೆ.

ಟೆಸ್ಲಾ ಕಾರುಗಳು ಹಾಗೂ ಇತರೆ ಉತ್ಪನ್ನಗಳಿಗೆ ಕಂಪನಿಯು ಮುಂಬರುವ ದಿನಗಳಲ್ಲಿ ಕ್ರಿಪ್ಟೊ ಕರೆನ್ಸಿ ಮೂಲಕವೇ ಪಾವತಿ ಪಡೆಯುವ ವ್ಯವಸ್ಥೆ ಆರಂಭಿಸುವುದಾಗಿ ನಿರೀಕ್ಷಿಸಲಾಗಿದೆ.

ಅನಧಿಕೃತ ವಹಿವಾಟಿಗಾಗಿ ಈ ಡಿಜಿಟಲ್‌ ಕರೆನ್ಸಿ ಬಳಕೆಯಾಗಬಹುದೆಂದು ಹಣಕಾಸು ನಿಬಂಧಕರು ಹಿಂದಿನಿಂದಲೂ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಬಿಟ್‌ಕಾಯಿನ್‌ ಬಳಕೆಗೆ ಅಧಿಕೃತತೆ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.